ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

2026 CWG: ವೇಟ್‌ಲಿಫ್ಟಿಂಗ್‌ನಲ್ಲಿ ಭಾರತದ ಋಷಿಕಾಂತ್ ಸಿಂಗ್‌ಗೆ ಬೆಳ್ಳಿ

ಗ್ಲ್ಯಾಸ್ಗೋ ಕಾಮನ್‌ವೆಲ್ತ್ ಗೇಮ್ಸ್‌ನ ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾರತದ ಋಷಿಕಾಂತ್ ಸಿಂಗ್ ಬೆಳ್ಳಿ ಪದಕ ಗೆಲ್ಲುವ ಮೂಲಕ ಕ್ರೀಡಾಪ್ರೇಮಿಗಳಲ್ಲಿ ಹೊಸ ಉತ್ಸಾಹ ಮೂಡಿಸಿದ್ದಾರೆ.

ಸ್ನ್ಯಾಚ್ ವಿಭಾಗದಲ್ಲಿ ಋಷಿಕಾಂತ್ ಸಿಂಗ್ ಭಾರಿ ಯಶಸ್ಸು ಕಂಡರು. ತಮ್ಮ ಮೂರನೇ ಯತ್ನದಲ್ಲಿ 121 ಕೆಜಿ ತೂಕ ಎತ್ತುವ ಮೂಲಕ ಕಾಮನ್‌ವೆಲ್ತ್ ಗೇಮ್ಸ್‌ನ ಹೊಸ ದಾಖಲೆಯನ್ನು ಬರೆದರು.

ಮಲೇಷ್ಯಾದ ಶ್ರೇಷ್ಠ ಅಥ್ಲೀಟ್ ಮೊಹಮ್ಮದ್ ಅನಿಕ್ ಕಸ್ದಾನ್ 273 ಕೆಜಿ ಒಟ್ಟು ತೂಕ ಎತ್ತಿ ಚಿನ್ನದ ಪದಕ ತಮ್ಮದಾಗಿಸಿಕೊಂಡರೆ, ಭಾರತದ ಋಷಿಕಾಂತ್ ಸಿಂಗ್ ಒಟ್ಟು 264 ಕೆಜಿ ತೂಕ ಎತ್ತುವ ಮೂಲಕ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕಕ್ಕೆ ಭಾಜನರಾದರು.

ಪ್ರಸಕ್ತ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ವೇಟ್‌ಲಿಫ್ಟಿಂಗ್ ವಿಭಾಗದಲ್ಲಿ ದೊರೆತ ಈ ಸಾಧನೆಯನ್ನು ಕ್ರೀಡಾ ಸಚಿವಾಲಯ ಹಾಗೂ ಕ್ರೀಡಾಭಿಮಾನಿಗಳು ಕೊಂಡಾಡಿದ್ದು, ಋಷಿಕಾಂತ್ ಸಿಂಗ್ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.

Edited By : Vijay Kumar
PublicNext

PublicNext

26/07/2026 04:33 pm

Cinque Terre

59.9 K

Cinque Terre

0

ಸಂಬಂಧಿತ ಸುದ್ದಿ