ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾಸನ: ನಾನು 1 ಸಾವಿರದ ವಾಚು ಕಟ್ತೇನೆ, 10 ಲಕ್ಷ ಮೌಲ್ಯದ ವಾಚನ್ನೂ ಕಟ್ತೇನೆ; ಡಿ.ಕೆ. ಶಿವಕುಮಾರ್‌

ಹಾಸನ: ರಾಜ್ಯ ರಾಜಕೀಯದಲ್ಲಿ ಸದ್ಯ ಕೈ ಗಡಿಯಾರದ ಜಟಾಪಟಿ ಜೋರಾಗಿದೆ. ಕಾರ್ಟಿಯರ್ ವಾಚ್ ಸದ್ಯ ಕಾಂಗ್ರೆಸ್​​ ಮತ್ತು ಬಿಜೆಪಿ ನಡುವೆ ಸಂಘರ್ಷ ಸೃಷ್ಟಿಸಿದೆ. ಈ ವಿಚಾರವಾಗಿ ಇದೀಗ ಸ್ವತಃ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ನನಗೆ ಎಷ್ಟು ಬೆಲೆಯ ವಾಚ್ ಬೇಕಾದರೂ ಕಟ್ಟುವಷ್ಟು ಶಕ್ತಿ ಇದೆ. ನಾನು ಒಂದು ಸಾವಿರ ರೂಪಾಯಿಯ ವಾಚ್ ಕಟ್ಟುತ್ತೇನೆ, 10 ಲಕ್ಷ ಮೌಲ್ಯದ ವಾಚನ್ನೂ ಕಟ್ಟುತ್ತೇನೆ. ಅದು ನನ್ನ ಸಂಪಾದನೆಯ ಆಸ್ತಿ. ನನ್ನ ವ್ಯವಹಾರ ಏನು, ನನ್ನ ಬದುಕು ಏನೆಂದು ಬಿಜೆಪಿಯವರಿಗೆ ಗೊತ್ತಿದೆ ಎಂದು ಕಿಡಿಕಾರಿದ್ದಾರೆ.

ನಗರದಲ್ಲಿ ನಡೆದ ಸರ್ಕಾರದ ಸೇವೆಗಳ ಸಮರ್ಪಣಾ ಸಮಾವೇಶ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಕೆಶಿ​, ಯಾರು ಪ್ಯಾಂಟ್ ಹಾಕುತ್ತಾರೆ, ವಾಚ್ ಕಟ್ಟುತ್ತಾರೆ, ಕನ್ನಡಕ ಹಾಕುತ್ತಾರೆ ಅದನ್ನು ಕೇಳೋಕೆ ಬರಲ್ಲ, ಅದು ಅವರವರ ವೈಯಕ್ತಿಕ ವಿಚಾರ. ಕೆಲವರು ಸಾವಿರ ರೂಪಾಯಿ ಮೌಲ್ಯದ ಶೂ ಹಾಕಿಕೊಳ್ಳುತ್ತಾರೆ. ಮತ್ತೆ ಕೆಲವರು ಒಂದು ಲಕ್ಷ ಮೌಲ್ಯದ ಶೂ ಹಾಕಿಕೊಳ್ಳುತ್ತಾರೆ ಎಂದರು.

Edited By :
PublicNext

PublicNext

06/12/2025 10:33 pm

Cinque Terre

15.04 K

Cinque Terre

1

ಸಂಬಂಧಿತ ಸುದ್ದಿ