ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಕಲೇಶಪುರ: ಸೈಬರ್ ಅಪರಾಧ ನಿಯಂತ್ರಣಕ್ಕೆ ಪರಿಣಾಮಕಾರಿ ಕಾನೂನು ಅವಶ್ಯಕ - ಶಾಸಕರಿಂದ ಸರ್ಕಾರಕ್ಕೆ ಮನವಿ

ಸಕಲೇಶಪುರ: ಸಕಲೇಶಪುರ–ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಿಮೆಂಟ್ ಮಂಜು ಅವರು ರಾಜ್ಯದಲ್ಲಿ ಹೆಚ್ಚುತ್ತಿರುವ ಸೈಬರ್ ಅಪರಾಧಗಳ ಬಗ್ಗೆ ಸದನದಲ್ಲಿ ಗಂಭೀರವಾದ ಆತಂಕ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ವಿಶೇಷವಾಗಿ ಆನ್‌ ಲೈನ್ ಬೆಟ್ಟಿಂಗ್, ಆನ್‌ ಲೈನ್ ಗೇಮ್ಸ್, ಹಾಗೂ ವಿವಿಧ ರೀತಿಯ ಸೈಬರ್ ವಂಚನೆಗಳಿಂದ ಸಾವಿರಾರು ಯುವಕರ ಜೀವನ ಹಾಳಾಗುತ್ತಿರುವ ಪ್ರಕರಣಗಳು ದಿನೇ ದಿನೇ ಏರಿಕೆಯಾಗುತ್ತಿವೆ. ಪ್ರಸ್ತುತ ಇಡೀ ದೇಶದಲ್ಲಿಯೇ ಕರ್ನಾಟಕದಲ್ಲೇ ಅತಿ ಹೆಚ್ಚು ಸೈಬರ್ ಕ್ರೈಂ ಪ್ರಕರಣಗಳು ದಾಖಲಾಗುತ್ತಿರುವುದು ಗಂಭೀರ ಕಳವಳಕ್ಕೆ ಕಾರಣವಾಗಿದೆ ಎಂದು ಅವರು ವಿವರಿಸಿದರು.

ಶಾಸಕ ಸಿಮೆಂಟ್ ಮಂಜು ಅವರು ಗೃಹಸಚಿವರನ್ನು ಉದ್ದೇಶಿಸಿ ಮಾತನಾಡುತ್ತಾ,“ಸೈಬರ್ ಅಪರಾಧಗಳು ವೇಗವಾಗಿ ರೂಪ ಬದಲಿಸುತ್ತಿವೆ. ಯುವಜನರು ಅತೀ ಸುಲಭವಾಗಿ ಬಲೆಗೆ ಸಿಲುಕುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಸರ್ಕಾರ ತಕ್ಷಣ ಗಮನ ಹರಿಸಿ, ಕಠಿಣ ಹಾಗೂ ಪರಿಣಾಮಕಾರಿ ಕಾನೂನು ಚೌಕಟ್ಟು ರೂಪಿಸಬೇಕು,” ಎಂದು ಸ್ಪಷ್ಟವಾಗಿ ಮನವಿ ಮಾಡಿದರು.

Edited By :
PublicNext

PublicNext

09/12/2025 06:50 pm

Cinque Terre

10.96 K

Cinque Terre

0

ಸಂಬಂಧಿತ ಸುದ್ದಿ