ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾಸನ ಜಿಲ್ಲಾಧಿಕಾರಿ ಕಚೇರಿಗೆ ಬಾಂಬ್ ಬೆದರಿಕೆ ಮೇಲ್

ಹಾಸನ : ಜಿಲ್ಲಾಧಿಕಾರಿ ಕಚೇರಿಗೆ ಬಾಂಬ್ ಬೆದರಿಕೆ ಮೇಲ್ ಬಂದಿದೆ. ಇ-ಮೇಲ್ ಸತ್ಯಾಸತ್ಯತೆ ಪರಿಶೀಲನೆ ಮಾಡಬೇಕಾಗುತ್ತದೆ. ಯಾರು ಆತಂಕಪಡುವುದು ಬೇಡ ಎಂದ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಪ್ರತಿಕ್ರಿಯಿಸಿದ್ದಾರೆ.

ಸೋಮವಾರ (ಡಿ.15) ಹಾಸನ ಕಲೆಕ್ಟರ್ ಅಂಡ್ ಸ್ಟಾಫ್ ಎಂದು ಮೇಲ್ ಬಂದಿದೆ. ಆರ್ಮಾ ಅಶ್ದಿನ್ ಶೇಖರ್ ಹೆಸರಿನಲ್ಲಿ ಮೇಲ್ ಬಂದಿದ್ದು, ಪಾಕಿಸ್ತಾನ ಐಎಸ್‌ಐ ಸೆಲ್ ಎಕ್ಸ್-ಎಲ್‌ಎಲ್‌ಟಿಐ ಕೇಡರ್‌ನಿಂದ ಬ್ಲಾಸ್ಟ್ ಆಯ್ಕೆ ಮಾಡಲಾಗುತ್ತಿದೆ ಎಂದು ಬರೆಯಲಾಗಿದೆ. ಮೇಲ್ ಬಂದ ತಕ್ಷಣವೇ ಹಾಸನ ಉಪವಿಭಾಗಾಧಿಕಾರಿ ಪೊಲೀಸರಿಗೆ ದೂರು ನೀಡಿದ್ದು, ದೂರಿನನ್ವಯ ಎಫ್‌ಐಆರ್ ದಾಖಲಾಗಿದೆ.

ಜಿಲ್ಲಾಧಿಕಾರಿ ಕಚೇರಿಗೆ ಜಿಲ್ಲಾ ಪೊಲೀಸರ ತಂಡ, ಶ್ವಾನದಳ ದೌಡಾಯಿಸಿದ್ದು, ಕಟ್ಟಡದ ಮೂಲೆ, ಮೂಲೆಯಲ್ಲಿಯೂ ಪರಿಶೀಲನೆ ನಡೆಸಿದ್ದಾರೆ.ಈ ಕುರಿತು ಹಾಸನ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಮಾತನಾಡಿ, ಯಾವುದೇ ಗಂಭೀರ ವಿಷಯ ಇಲ್ಲ. ಇ-ಮೇಲ್ ಸತ್ಯಾಸತ್ಯತೆ ಪರಿಶೀಲನೆ ಮಾಡಬೇಕಾಗಿದ್ದು, ಯಾರು ಆತಂಕ ಪಡುವುದು ಬೇಡ ಎಂದಿದ್ದಾರೆ.

Edited By : Manjunath H D
PublicNext

PublicNext

16/12/2025 01:23 pm

Cinque Terre

5.84 K

Cinque Terre

0

ಸಂಬಂಧಿತ ಸುದ್ದಿ