ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾಸನ : ಡ್ರಗ್ಸ್ ಅಮಲಿನಲ್ಲಿ ಯುವಕನ ಬರ್ಬರ ಹತ್ಯೆ!ಹೆಣದ ಮುಂದೆ ವಿಡಿಯೋ ಮಾಡಿದ ಪಾಪಿಗಳು

ಹಾಸನ : ನಗರದ ಹೊರವಲಯದಲ್ಲಿ ಆಘಾತಕಾರಿ ಕೃತ್ಯವೊಂದು ಬೆಳಕಿಗೆ ಬಂದಿದೆ. ಡ್ರಗ್ಸ್ ಅಮಲಿನಲ್ಲಿ ಯುವಕನ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆ ಮಾಡಿರುವ ದುಷ್ಕರ್ಮಿಗಳು, ಕೊಲೆಯ ಬಳಿಕ ಮೃತದೇಹದ ಎದುರು ನಿಂತು ವಿಡಿಯೋ ಚಿತ್ರೀಕರಿಸಿದ್ದಾರೆ.

ಹೊಳೆನರಸೀಪುರ ರಸ್ತೆಯ ಇಂಡಸ್ಟ್ರಿಯಲ್ ಏರಿಯಾದಲ್ಲಿ ಈ ಘಟನೆ ನಡೆದಿದ್ದು, ಕೊಲೆಯಾದ ಯುವಕನ ಗುರುತು ಇನ್ನೂ ಪತ್ತೆಯಾಗಿಲ್ಲ. ವೈರಲ್ ವಿಡಿಯೋದಲ್ಲಿ ನಾವು ಕೊಲೆ ಮಾಡಿದ್ದೇವೆ ಎಂದು ಯುವಕನೋರ್ವ ಮೃತದೇಹವನ್ನು ತೋರಿಸುತ್ತಿರುವುದು ಸೆರೆಯಾಗಿದೆ. ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು, ಪ್ರಕರಣ ದಾಖಲಿಸಿದ್ದಾರೆ.

ಆರೋಪಿಗಳನ್ನು ಪತ್ತೆಹಚ್ಚಲು ಹಾಗೂ ಹತ್ಯೆಯ ಹಿಂದಿರುವ ಕಾರಣ ಪತ್ತೆಹಚ್ಚಲು ಖಾಕಿ ತಂಡ ತನಿಖೆ ಆರಂಭಿಸಿದೆ.

Edited By : Shivu K
PublicNext

PublicNext

09/12/2025 04:55 pm

Cinque Terre

16.68 K

Cinque Terre

2