ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

IPL 2026 : ಮೊದಲ ಸುತ್ತಿನಲ್ಲಿ ನಾಲ್ವರು ಆಟಗಾರರು ಅನ್​ಸೋಲ್ಡ್,

ಅಬುಧಾಬಿಯ ಇತಿಹಾದ್ ಅರೇನಾದಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 19ನೇ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆ ತೀವ್ರ ಕುತೂಹಲ ಕೆರಳಿಸಿದೆ. ಒಟ್ಟು 369 ಆಟಗಾರರು ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದು, ಮೊದಲ ಸುತ್ತಿನಲ್ಲೇ ಹಲವು ಅನಿರೀಕ್ಷಿತ ಬೆಳವಣಿಗೆಗಳು ಕಂಡುಬಂದಿವೆ. ಅದರಲ್ಲೂ, ಹೆಚ್ಚಿನ ನಿರೀಕ್ಷೆಯಲ್ಲಿದ್ದ ಕೆಲ ಪ್ರಮುಖ ಹಾಗೂ ಹೆಸರು ಮಾಡಿದ ಆಟಗಾರರು ಮೊದಲ ಸುತ್ತಿನಲ್ಲಿ ಅನ್‌ಸೋಲ್ಡ್ ಆಗಿರುವುದು ಕ್ರಿಕೆಟ್ ಅಭಿಮಾನಿಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಆಸ್ಟ್ರೇಲಿಯಾದ ಯುವ ಹಾಗೂ ಸ್ಫೋಟಕ ಬ್ಯಾಟ್ಸ್‌ಮನ್ ಜೇಕ್ ಫ್ರೇಸರ್ ಮೆಕ್‌ಗುರ್ಕ್, ಐಪಿಎಲ್ 2024ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಗಮನಾರ್ಹ ಪ್ರದರ್ಶನ ನೀಡಿದ್ದರು. ಆದರೂ, 2 ಕೋಟಿ ರೂಪಾಯಿ ಮೂಲ ಬೆಲೆಯೊಂದಿಗೆ ಹರಾಜಿಗೆ ಬಂದಾಗ ಯಾವುದೇ ಫ್ರಾಂಚೈಸಿಯೂ ಅವರನ್ನು ಖರೀದಿಸಲು ಮುಂದೆ ಬರಲಿಲ್ಲ. ಇದು ಅನೇಕರನ್ನು ಅಚ್ಚರಿಗೊಳಿಸಿದೆ.

ಟೀಮ್ ಇಂಡಿಯಾದ ಪ್ರತಿಭಾವಂತ ಬ್ಯಾಟ್ಸ್‌ಮನ್ ಪೃಥ್ವಿ ಶಾ ಅವರಿಗೂ ನಿರಾಶೆ ಎದುರಾಗಿದೆ. 75 ಲಕ್ಷ ರೂಪಾಯಿ ಮೂಲ ಬೆಲೆಯೊಂದಿಗೆ ಹರಾಜಿಗೆ ಬಂದಿದ್ದ ಅವರನ್ನು ಮೊದಲ ಸುತ್ತಿನಲ್ಲಿ ಯಾವುದೇ ತಂಡ ಖರೀದಿಸಲಿಲ್ಲ. ಇದೇ ಸನ್ನಿವೇಶ ಭಾರತದ ಬಲಗೈ ಬ್ಯಾಟ್ಸ್‌ಮನ್ ಸರ್ಫರಾಝ್ ಖಾನ್ ಅವರಿಗೂ ಎದುರಾಗಿದ್ದು, ಅವರೂ 75 ಲಕ್ಷ ರೂ. ಮೂಲ ಬೆಲೆಗೆ ಅನ್‌ಸೋಲ್ಡ್ ಆಗಿದ್ದಾರೆ.

ನ್ಯೂಝಿಲೆಂಡ್‌ನ ಅನುಭವಿ ಆಟಗಾರ ಡೆವೊನ್ ಕಾನ್ವೆ ಅವರೂ ಮೊದಲ ಸುತ್ತಿನಲ್ಲಿ ಖರೀದಿಯಾಗದೆ ಉಳಿದಿರುವುದು ಮತ್ತೊಂದು ಅಚ್ಚರಿಗೆ ಕಾರಣವಾಗಿದೆ. ಈ ಪ್ರಮುಖ ಆಟಗಾರರು ಮುಂದಿನ ಸುತ್ತುಗಳಲ್ಲಿ ಖರೀದಿಯಾಗುತ್ತಾರೆಯೇ ಎಂಬುದರ ಬಗ್ಗೆ ಎಲ್ಲರ ಚಿತ್ತ ನೆಟ್ಟಿದೆ.

Edited By :
PublicNext

PublicNext

16/12/2025 04:28 pm

Cinque Terre

15.8 K

Cinque Terre

0