ಅಬುಧಾಬಿ : ಅಬುಧಾಬಿಯಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಮಿನಿ ಹರಾಜಿನಲ್ಲಿ ಶ್ರೀಲಂಕಾದ ಮಧ್ಯಮ ವೇಗದ ಬೌಲರ್ ಮತೀಶಾ ಪತಿರಾಣ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಕೋಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್) ಫ್ರಾಂಚೈಸಿ ಅವರನ್ನು ಬರೋಬ್ಬರಿ ₹18 ಕೋಟಿ ನೀಡಿ ಖರೀದಿಸಿದ್ದು, ಐಪಿಎಲ್ ಇತಿಹಾಸದಲ್ಲಿ ಶ್ರೀಲಂಕಾ ಆಟಗಾರನೊಬ್ಬ ಪಡೆದ ಅತ್ಯಧಿಕ ಮೊತ್ತಕ್ಕೆ ಹರಾಜಾದ ದಾಖಲೆ ಬರೆದಿದ್ದಾರೆ.
ಪತಿರಾಣ ಅವರನ್ನು ಖರೀದಿಸಲು ರಾಜಸ್ಥಾನ ರಾಯಲ್ಸ್ ಹಾಗೂ ಲಖನೌ ಸೂಪರ್‌ಜೈಂಟ್ಸ್ ಫ್ರಾಂಚೈಸಿಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಆರಂಭದಲ್ಲಿ ರಾಜಸ್ಥಾನ ರಾಯಲ್ಸ್ ಬಿಡ್‌ನಿಂದ ಹೊರಬಿದ್ದ ನಂತರ, ಕೋಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್) ಬಿಡ್ಡಿಂಗ್‌ಗೆ ಪ್ರವೇಶಿಸಿತು. ಲಖನೌ ಸೂಪರ್‌ಜೈಂಟ್ಸ್ ಜೊತೆ ಕಠಿಣ ಪೈಪೋಟಿ ನಡೆಸಿದ ಕೆಕೆಆರ್, ಅಂತಿಮವಾಗಿ ಮತೀಶಾ ಪತಿರಾಣ ಅವರನ್ನು ₹18 ಕೋಟಿಗಳ ದಾಖಲೆ ಮೊತ್ತಕ್ಕೆ ತನ್ನದಾಗಿಸಿಕೊಂಡಿತು.
ಕಳೆದ ಮೂರು ಸೀಸನ್‌ಗಳಿಂದ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಪರ ಆಡಿರುವ ಮತೀಶಾ ಪತಿರಾಣ, ತಮ್ಮ ಗಮನಾರ್ಹ ಬೌಲಿಂಗ್ ಪ್ರದರ್ಶನಗಳ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಅವರ ಈ ಸ್ಥಿರ ಪ್ರದರ್ಶನವೇ ಇಂದಿನ ದಾಖಲೆ ಮೊತ್ತದ ಹರಾಜಿಗೆ ಪ್ರಮುಖ ಕಾರಣವಾಗಿದೆ.
PublicNext
16/12/2025 05:45 pm
LOADING...