ಮೊಳಕಾಲ್ಮುರು:-ಮುಂಬರುವ ಎಸ್‌ಎಸ್‌ಎಲ್ಸಿ ಪರೀಕ್ಷೆಯನ್ನು ವಿದ್ಯಾರ್ಥಿಗಳು ಗಂಭೀರವಾಗಿ ಪರಿಗಣಿಸಿ ಉತ್ತಮ ವಿದ್ಯಾಭ್ಯಾಸ ಕೈಗೊಂಡು ಹೆಚ್ಚು ಅಂಕ ಪಡೆಯುವತ್ತ ಇಂದಿನಿಂದಲೇ ಶ್ರಮಿಸಬೇಕು ಎಂದು ಶಾಸಕ ಎನ್.ವೈ.ಗೋಪಾಲಕೃಷ್ಣ ತಿಳಿಸಿದರು.
ತಾಲೂಕಿನ ದೇವಸಮುದ್ರ ಸರಕಾರಿ ಪ್ರೌಢಶಾಲಾ ಆವರಣದಲ್ಲಿ ಜಿಪಂ, ತಾಪಂ, ಶಾಲಾ ಶಿಕ್ಷಣ ಮತ್ತು | ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗಳಿಂದ 2025-26 ನೇ ಸಾಲಿನ ಎಸ್ಎಸ್ಎಲ್ಸಿ ಫಲಿತಾಂಶ ಉತ್ತಮ ಪಡಿಸಲು ಬುಧವಾರ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎಸ್‌ಎಸ್‌ಎಲ್‌ಸಿ ವಿದ್ಯಾಭ್ಯಾಸ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳು ಹೆಚ್ಚು ಅಂಕ ಪಡೆಯುವ ಗುರಿ ಹೊಂದಬೇಕು. ಶಾಲೆಗಳಲ್ಲಿ ಶಿಕ್ಷಕರು ಹೇಳುವ ನಾನಾ ವಿಷಯಗಳನ್ನು ಮನದಟ್ಟು ಮಾಡಿಕೊಂಡು ಪರೀಕ್ಷೆಯನ್ನು ಬರೆಯಬೇಕು. ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಪಂ ಇಒ ಎಚ್.ಹನುಮಂತಪ್ಪ, ಬಿಇಒ ಇ.ನಿರ್ಮಲಾದೇವಿ, ಬಿಆರ್‌ಸಿ ಕೆ.ತಿಪ್ಪೇಸ್ವಾಮಿ, ಬಿಸಿಯೂಟ ಯೋಜನಾಧಿಕಾರಿ ಎಂ.ಹನುಮಂತಪ್ಪ, ಶಿಕ್ಷಣ ಸಂಯೋಜಕ ಲೋಹಿತ್, ಮುಖಂಡರಾದ ಕುಮಾರಸ್ವಾಮಿ, ಚಂದ್ರು, ಪರಮೇಶ್ವರಪ್ಪ, ಪಿಎಸ್‌ಐ ಬಾಹುಬಲಿ ಇದ್ದರು.
Kshetra Samachara
21/01/2026 05:38 pm
LOADING...