ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಳ್ಳಕೆರೆ : ಮೂರು ಕೇಂದ್ರದಲ್ಲಿ ಎನ್ ಎಂ.ಎಂ.ಎಸ್ ಪರೀಕ್ಷೆ ಬರೆದ 8ನೇ ತರಗತಿಯ ವಿದ್ಯಾರ್ಥಿಗಳು

ಚಳ್ಳಕೆರೆ :ಎನ್ ಎಂ ಎಂ ಎಸ್ (NMMS - National Means-cum-Merit Scholarship) ಪರೀಕ್ಷೆ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ನೀಡುವ ಒಂದು ವಿದ್ಯಾರ್ಥಿವೇತನ ಯೋಜನೆ. ಇದು 8ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ 9ನೇ ತರಗತಿಯಿಂದ 12ನೇ ತರಗತಿಯವರೆಗೆ ವಿದ್ಯಾರ್ಥಿವೇತನ ಸಿಗುತ್ತದೆ ಎಂದು ಬಿಇಓ ಕೆ.ಎಸ್ ಸುರೇಶ ಹೇಳಿದರು.

ಚಳ್ಳಕೆರೆ ನಗರದ ‌ಇಂದು ನಡೆದ ಎನ್ .ಎಂ.ಎಂ ಎಸ್ ಪರೀಕ್ಷೆ ಕೇಂದ್ರಗಳಿಗೆ ಭೇಟಿ ನೀಡಿ ನಂತರ ಮಾಧ್ಯಮದ ಜತೆ ಮಾತನಾಡಿ.ಎನ್ ಎಂ ಎಂ ಎಸ್ ಪರೀಕ್ಷೆಯಿಂದ ಹಲವು ಉಪಯೋಗಗಳಿವೆ.ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಾರ್ಷಿಕ ₹12,000 ವಿದ್ಯಾರ್ಥಿವೇತನ ಸಿಗುತ್ತದೆ. ಇದು ಅವರ ಶಿಕ್ಷಣವನ್ನು ಮುಂದುವರಿಸಲು ಸಹಾಯ ಮಾಡುತ್ತದೆ. ಈ ವಿದ್ಯಾರ್ಥಿವೇತನದಿಂದಾಗಿ ವಿದ್ಯಾರ್ಥಿಗಳು 8ನೇ ತರಗತಿಯ ನಂತರ ಶಾಲೆಯನ್ನು ಬಿಡದೆ ಮುಂದಿನ ಶಿಕ್ಷಣವನ್ನು ಮುಂದುವರಿಸಲು ಪ್ರೋತ್ಸಾಹ ಸಿಗುತ್ತದೆ

ಪರೀಕ್ಷೆಯು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುತ್ತದೆ.

ಆರ್ಥಿಕ ಕಾರಣಗಳಿಂದ ಶಾಲೆಯನ್ನು ಬಿಡುವ ವಿದ್ಯಾರ್ಥಿಗಳ ಸಂಖ್ಯೆಯನ್ನು ಕಡಿಮೆ ಮಾಡಲು ಈ ಯೋಜನೆ ಸಹಾಯ ಮಾಡುತ್ತದೆ ಈ ವಿದ್ಯಾರ್ಥಿವೇತನವು ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಮತ್ತು ಉತ್ತಮ ಭವಿಷ್ಯವನ್ನು ನಿರ್ಮಿಸಲು ಅವಕಾಶ ನೀಡುತ್ತದೆ.

ಈ ಪರೀಕ್ಷೆಗೆ ಅರ್ಹತೆ ಪಡೆಯಲು, ವಿದ್ಯಾರ್ಥಿಗಳು 7ನೇ ತರಗತಿಯಲ್ಲಿ ಕನಿಷ್ಠ 55% ಅಂಕಗಳನ್ನು ಪಡೆದಿರಬೇಕು ಮತ್ತು ಪೋಷಕರ ವಾರ್ಷಿಕ ಆದಾಯ ₹3.5 ಲಕ್ಷಕ್ಕಿಂತ ಕಡಿಮೆ ಇರಬೇಕು ಎಸ್ ಎಸ್ ಎಲ್ ಸಿ ನಂತರ ಪಿಯುಸಿಯಲ್ಲಿ ಸಹ ಸರ್ಕಾರಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದರೆ ಇದು ಮುಂದುವರಿಯುತ್ತೆ.ಇಲ್ಲಾವಾದಲಿ ಕಡಿತವಾಗುತ್ತದೆ ಎಂಟನೇ ತರಗತಿಯ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆಸಿಕೊಳ್ಳುತ್ತಿದ್ದಾರೆ ಎಂದು ಮಾಹಿತಿ ನೀಡಿದರು..

Edited By : PublicNext Desk
Kshetra Samachara

Kshetra Samachara

01/02/2026 04:31 pm

Cinque Terre

1.02 K

Cinque Terre

0

ಸಂಬಂಧಿತ ಸುದ್ದಿ