ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಡಾನೆ ದಾಳಿಗೆ ಮುಸುಕಿನ ಜೋಳದ ಫಸಲು ನಾಶ

ಚಾಮರಾಜನಗರ : ಕಾಡಾನೆ - ದಾಳಿಯಿಂದಾಗಿ ಮುಸುಕಿನ ಜೋಳದ ಫಸಲಿನ ಜೊತೆಗೆ ಸೋಲಾರ್ ತಂತಿ ಬೇಲಿಯು ಸಹ ನಾಶವಾಗಿರುವ ಘಟನೆ ಹನೂರು ತಾಲೂಕಿನ ಮಲ್ಲಯ್ಯನಪುರ ಗ್ರಾಮದಲ್ಲಿ ನಡೆದಿದೆ.

ತಾಲೂಕಿನ ಮಲ್ಲಯ್ಯನಪುರ ಗ್ರಾಮದ ಗೋವಿಂದಯ್ಯ ಎಂಬವರಿಗೆ ಸೇರಿದ ಜಮಿ ನಿಗೆ ಲಗ್ಗೆ ಇಟ್ಟಿರುವ ಕಾಡಾನೆಗಳು ಜೋಳದ ಫಸಲು ಹಾಗೂ ಸೋಲಾರ್ ತಂತಿಯನ್ನು ತುಳಿದು ನಾಶಪಡಿಸಿದೆ. ಗೋವಿಂದಯ್ಯ ತನಗಿರುವ ಅಲ್ಪ ಜಮೀನಿನಲ್ಲಿ ಮುಸುಕಿನ ಜೋಳವನ್ನು ಬೆಳೆದಿದ್ದರು. ಇನ್ನೇನು ಕೆಲವೇ ದಿನಗಳಲ್ಲಿ ಕಟಾವು ಮಾಡುವ ಹಂತಕ್ಕೆ ಬಂದು ನಿಂತಿತ್ತು. ಆದರೆ, ಕಾಡಾನೆ ದಾಳಿಯಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಜೋಳದ ಫಸಲು ನಾಶದಿಂದ ರೈತ ಗೋವಿಂದಯ್ಯ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಡಲೇ ಸಂಬಂಧಪಟ್ಟವರು ರೈತ ಗೋವಿಂದಯ್ಯ ಅವರಿಗೆ ಸೂಕ್ತ ಪರಿಹಾರ ಕೊಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಕಳೆದ ಹಲವಾರು ತಿಂಗಳಿನಿಂದಲೂ ಸಹ ದಿನನಿತ್ಯ ಒಂದಲ್ಲ ಒಂದು ಜಮೀನಿಗೆ ಲಗ್ಗೆ ಇಡುವ ಕಾಡಾನೆಗಳು ಬೆಳೆ ಹಾನಿ ಮಾಡುವುದರ ಜೊತೆಗೆ ಕೃಷಿ ಉಪಕರಣಗಳನ್ನು ನಾಶಪಡಿಸುತ್ತಿವೆ. ಕಾಡಾನೆಗಳ ಉಪಟಳದಿಂದಾಗಿ ರೈತರು ಭಯದ ವಾತಾವರಣದಲ್ಲಿ ಜೀವನ ಸಾಗಿಸಬೇಕಾಗಿದೆ. ಕೂಡಲೇ ಅರಣ್ಯ ಇಲಾಖೆ ಕಾಡಾನೆಗಳ ಉಪಟಳ ತಪ್ಪಿಸಲು ಕ್ರಮವಹಿಸಬೇಕಿದೆ.

Edited By : PublicNext Desk
Kshetra Samachara

Kshetra Samachara

26/01/2026 03:54 pm

Cinque Terre

5.6 K

Cinque Terre

0

ಸಂಬಂಧಿತ ಸುದ್ದಿ