ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಸರ್ಕಾರದ ಚಲ್ಲಾಟ: ಸಚಿವರೇ ಏನಿದು ಅವ್ಯವಸ್ಥೆ..?

ಹುಬ್ಬಳ್ಳಿ: ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಚೆಲ್ಲಾಟವಾಡುತ್ತಿದೆಯಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ..? ಸಚಿವ ಶಿವರಾಜ್ ತಂಗಡಗಿ ಅವರೇ ಇದೇನಾ ವಿದ್ಯಾರ್ಥಿ ಮೇಲಿನ ನಿಮ್ಮ ಕಾಳಜಿ..? ಸರ್ಕಾರದ ನಿರ್ಲಕ್ಷ್ಯ ಧೋರಣೆಯಿಂದ ಧಾರವಾಡ, ಹುಬ್ಬಳ್ಳಿಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಬೇಸತ್ತು ಹೋಗಿದ್ದಾರೆ.

ಒಂದೆಡೆ ಪರೀಕ್ಷೆ ಬಿಸಿ ಜೊತೆಗೆ ಮತ್ತೊಂದು ಕಡೆಯಲ್ಲಿ ರಾಜ್ಯ ವಿದ್ಯಾರ್ಥಿ ವೇತನ ದಾಖಲೆಗಳ ಪರಿಶೀಲನೆ ಟೆನ್ಸನ್ ವಿದ್ಯಾರ್ಥಿಗಳಿಗೆ ಎದುರಾಗಿದೆ.

ಹೌದು.. ಒಂದು ಕಡೆ ಎಲ್‌. ಎಲ್. ಬಿ ಸೇರಿದಂತೆ ವಿವಿಧ ಪದವಿ ಮತ್ತು ವೃತ್ತಿ ಪರ ಶಿಕ್ಷಣ ಸೆಮಿಸ್ಟರ್ ಪರೀಕ್ಷೆ ಬಂದಿದೆ. ಮತ್ತೊಂದು ಕಡೆ ಅಸಮರ್ಪಕವಾಗಿ ವಿದ್ಯಾರ್ಥಿ ವೇತನ ದಾಖಲೆ ಪರಿಶೀಲನೆ ವ್ಯವಸ್ಥೆ ನಡೆಯುತ್ತಿದೆ. ನೀರು, ಆಹಾರ ಬಿಟ್ಟು ಗಂಟೆಗಟ್ಟಲೆ ಕ್ಯೂ ನಲ್ಲಿ ಕಾದು ನಿಂತ ವಿದ್ಯಾರ್ಥಿಗಳು ಗೋಳು ಕೇಳುವವರೇ ಇಲ್ಲದಂತಾಗಿದೆ.

ಇನ್ನೂ ಈ ಮಧ್ಯೆ ಸಿಬ್ಬಂದಿ ಸರ್ವರ್‌ ನೆಪ ಹೇಳಿ ಸತಾಯಿಸುತ್ತಿರುವ ಇಲಾಖೆ ಅಧಿಕಾರಿಗಳ ನಡೆಗೆ ವಿದ್ಯಾರ್ಥಿ ವಲಯದಲ್ಲಿ ಸಾಕಷ್ಟು ಆಕ್ರೋಶ ಸೃಷ್ಟಿಯಾಗಿದೆ. ಈ ಬಗ್ಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರು ಗಮನ ಹರಿಸಿ ಸೂಕ್ತ ಕ್ರಮಗಳನ್ನು ಜರುಗಿಸುವ ಕಾರ್ಯ ಮಾಡಬೇಕಿದೆ.

ಮಲ್ಲೇಶ್ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ

Edited By :
Kshetra Samachara

Kshetra Samachara

30/01/2026 04:48 pm

Cinque Terre

13.44 K

Cinque Terre

3

ಸಂಬಂಧಿತ ಸುದ್ದಿ