ಹಾವೇರಿ: ಡಾ.ಸಿ.ಜೆ.ರಾಯ್ ಸಾವಿನ ಸುದ್ದಿ ಕೇಳಿ ಬಹಳ ದುಃಖವಾಗಿದೆ ಎಂದು ಬಿಗ್ ಬಾಸ್ ಸೀಜನ್ 11 ರ ವಿಜೇತ ಹನುಮಂತು ಬೇಸರ ವ್ಯಕ್ತಪಡಿಸಿದ್ದಾರೆ. ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಚಿಲ್ಲೂರು ಬಡ್ನಿ ಗ್ರಾಮದಲ್ಲಿ ಮಾತನಾಡಿದ ಹನುಮಂತು ರಾಯ್ ನಿಧನಕ್ಕೆ ಬೇಸರ ವ್ಯಕ್ತಪಡಿಸಿದರು.
ಅವರು ನನಗೆ ಎರಡೂ ಬಾರಿ ಬಹುಮಾನ ಕೊಟ್ಟಿದ್ದಾರೆ. ನಿಮ್ಮೂರಿಗೆ ಬರುತ್ತೇನೆ ಅಂತಾ ಹೇಳಿದ್ದರು. ಇದೀಗ ಬಾರದೂರಿಗೆ ಪಯಣಿಸಿದ್ದು ನೋವು ತಂದಿದೆ ಎಂದು ಹನುಮಂತು ದುಃಖ ವ್ಯಕ್ತಪಡಿಸಿದರು. ಮನೆ ಕಟ್ಟಿಸು ಗೃಹಪ್ರವೇಶಕ್ಕೆ ಕರಿ ನಾನು ಬರುತ್ತೇನೆ ಅಂತಾ ಹೇಳಿದ್ದರು. ನನಗೆ ಐದು ಕುರಿ ಕೊಡು ಅಂತಾ ಕೇಳಿದ್ದರು ಎಂದು ಹನುಮಂತು ರಾಯ್ ಜೊತೆಗಿನ ನೆನಪು ಬಿಚ್ಚಿಟ್ಟರು.
PublicNext
31/01/2026 02:33 pm
LOADING...