ಹಾವೇರಿ: GST ನಂಬರ್ ಗೆ ಸಂಬಂಧಿಸಿದಂತೆ ಪಡಿತರ ಚೀಟಿ ರದ್ದಾಗಿರುವ ಕುರಿತು ಪತ್ರ ನೀಡಲು ಲಂಚ ಸ್ವೀಕರಿಸ್ತಿದ್ದ ವೇಳೆ ಲೋಕಾಯುಕ್ತರು ವಾಣಿಜ್ಯ ತೆರಿಗೆ ಇಲಾಖೆ ನೌಕರ ಸಿಬ್ಬಂದಿ ಮೇಲೆ ದಾಳಿ ನಡೆಸಿ ಶಾಕ್ ನೀಡಿದ್ದಾರೆ.
ಹಾವೇರಿ ವಾಣಿಜ್ಯ ತೆರಿಗೆ ಇಲಾಖೆ ಸಿಬ್ಬಂದಿ ಪಕ್ಕಿರಗೌಡ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಡಿ. ಇ. ಓ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ. ಆದರೆ ಸೋಮಲಿಂಗಪ್ಪ ಎಂಬುವವರ GST ನಂಬರ್‌ಗೆ ಸಂಬಂಧಿಸಿದಂತೆ ಪಡಿತರ ಚೀಟಿ ರದ್ದಾಗಿರುವ ಕುರಿತು ಪತ್ರ ನೀಡಲು 15 ಸಾವಿರಕ್ಕೆ ಡಿಮ್ಯಾಂಡ್ ಮಾಡಿದ್ದ. ಅದರಂತೆ 5 ಸಾವಿರ ರೂಪಾಯಿ ಮುಂಗಡವಾಗಿ ಸ್ವೀಕರಿಸ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಪ್ರಕರಣದಲ್ಲಿ ಸಿಬ್ಬಂದಿ ಪಕ್ಕಿರಗೌಡನನ್ನ ಲೋಕಾಯುಕ್ತರ ಪೊಲೀಸರು ಬಂಧನ ಮಾಡಿ, ವಿಚಾರಣೆ ನಡೆಸಿದ್ದಾರೆ.
Kshetra Samachara
29/01/2026 08:06 am
LOADING...