ಹಾವೇರಿ : ಮದುವೆಯಾಗಿ ಒಂದು ಮಗು ಆದ ನಂತರವೂ ಕೂಡ ವರದಕ್ಷಿಣೆ ತಂದು ಕೊಡು ಅಂತಾ ಪದೇ ಪದೇ ಕಿರುಕುಳ ನೀಡುವುದಲ್ಲದೆ, ತವರು ಮನೆಯಲ್ಲಿದ್ದ ಹೆಂಡತಿ ಹಾಗೂ ಆಕೆಯ ಮನೆಯವರ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಆರೋಪದಡಿಯಲ್ಲಿ ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಮಂತಗಿ ಗ್ರಾಮದ ಶಹನಾಜಬಾನುವನ್ನು ಅದೇ ಗ್ರಾಮದ ಅಬೂಬಕ್ಕರ್ ಎಂಬಾತನ ಜೊತೆ 3 ವರ್ಷಗಳ ಹಿಂದೆ ಮದುವೆ ಮಾಡಿ ಕೊಡಲಾಗಿತ್ತು, ಮದುವೆಯಾಗಿ ಒಂದೆರಡು ತಿಂಗಳ ಕಾಲ ಚೆನ್ನಾಗಿದ್ದ ಅಬೂಬಕ್ಕರ್ ಹಾಗೂ ಆತನ ಮನೆಯವರು ವರದಕ್ಷಿಣೆ ತೆಗೆದುಕೊಂಡು ಬಾ ಅಂತಾ ಶಹನಾಜಬಾನುಗೆ ನಿರಂತರ ಕಿರುಕುಳ ಶುರು ಮಾಡಿದ್ದಾರೆ.
ಇಬ್ಬರ ದಂಪತ್ಯಕ್ಕೆ ಸಾಕ್ಷಿಯಾಗಿ ಒಂದೂವರೆ ವರ್ಷದ ಮಗು ಆದರೂ ಕೂಡ ಗಂಡನ ಮನೆಯಲ್ಲಿ ವರದಕ್ಷಿಣೆ ದಾಹ ತಗ್ಗಿಲ್ಲ, ಒಂದು ವಾರದ ಹಿಂದೆ ಅನಾರೋಗ್ಯದ ಕಾರಣ ಶಹನಾಜಬಾನು ತವರು ಮನೆಗೆ ಹೋದಾಗ, ಗಂಡ ಅಬೂಬಕ್ಕರ್ ಹಾಗೂ ಆತನ ಮನೆಯವರು ಶಹನಾಜಬಾನು ಹಾಗೂ ಆತನ ಮನೆಯವರಿಗೆ ಅವಾಚ್ಯವಾಗಿ ನಿಂದನೆ ಮಾಡಿ ಹಲ್ಲೆ ನಡೆಸಿದ ಪರಿಣಾಮ ಶಹನಾಜಬಾನುವಿನ ಅಕ್ಕನ ಕೈ ಮುರಿದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹಾನಗಲ್ ಪೊಲೀಸ್ ಠಾಣೆಯಲ್ಲಿ ಶಹನಾಜಬಾನು ಹಾಗೂ ಆಕೆಯ ತವರು ಮನೆಯವರು ನೀಡಿದ ದೂರಿನ ಮೇಲೆ ಪ್ರಕರಣ ದಾಖಲು ಮಾಡಿದ್ದು, ಹಲ್ಲೆ ಹಾಗೂ ಜೀವ ಬೆದರಿಕೆ ಹಾಕಿದ ಆರೋಪಿಗಳ ಮೇಲೆ ಪೊಲೀಸರು ಯಾವ ರೀತಿಯಾದ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ವಿನಯ ರೆಡ್ಡಿ ಪಬ್ಲಿಕ್ ನೆಕ್ಸ್ಟ್ ಹಾವೇರಿ
PublicNext
28/01/2026 12:44 pm
LOADING...