ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾನಗಲ್ಲಿನಲ್ಲಿ ವಿವಿಧೆಡೆ ಐದು ದ್ವಿಚಕ್ರ ವಾಹನ ಜಪ್ತಿ-ಇಬ್ಬರು ಆರೋಪಿಗಳ ಬಂಧನ

ಹಾನಗಲ್: ಹಾನಗಲ್ ತಾಲೂಕಿನಲ್ಲಿ ವಿವಿಧೆಡೆ ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಹಾನಗಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹೌದು ಹಾನಗಲ್ ತಾಲೂಕಿನ ಕುಂಟೇನಹೊಸಳ್ಳಿ ಗ್ರಾಮದ ನಿವಾಸಿಯಾದ 34 ವರ್ಷದ ಉಸ್ಮಾನ್ ಖಾದರ್ ಸಾಬ್ ಯಳವಟ್ಟಿ, ಹಾಗೂ ಇನ್ನೊಬ್ಬ ಆರೋಪಿ ಅಪ್ರಾಪ್ತ ಬಾಲಕ ಎಂದು ತಿಳಿದು ಬಂದಿದೆ. ಬಂಧಿತ ಆರೋಪಿಗಳಿಂದ, ಒಟ್ಟು ₹3.20 ಲಕ್ಷ ಮೌಲ್ಯದ ವಿವಿಧ ಕಂಪನಿಯ 5 ದ್ವಿಚಕ್ರ ವಾಹನಗಳನ್ನು ಹಾನಗಲ್ ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ದ್ವಿಚಕ್ರ ವಾಹನಗಳನ್ನು ಕಳವು ಮಾಡಿದ್ದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಆರೋಪಿಗಳ ಬಂಧನದಿಂದ ಹಾನಗಲ್ ಪಟ್ಟಣದ ದತ್ತ ದೇವಸ್ಥಾನದ ಓಣಿಯಲ್ಲಿ 3 ಹಾಗೂ ಎಪಿಎಂಸಿ ಹತ್ತಿರ ತಲಾ 2 ದ್ವಿಚಕ್ರ ವಾಹನವನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಪ್ರಕರಣವನ್ನು ಎಸ್‌ಪಿ ಯಶೋಧಾ ವಂಟಗೋಡಿ ಹಾವೇರಿ, ಎಲ್.ವೈ.ಶಿರಕೋಳ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶಿಗ್ಗಾoವಿ, ಹಾಗೂ ಗುರುಶಾಂತಪ್ಪ ಜಿ, ಪೊಲೀಸ್ ಉಪ-ಅಧೀಕ್ಷಕರು ಶಿಗ್ಗಾoವಿ, ಇವರ ಮಾರ್ಗದರ್ಶನದಲ್ಲಿ ಹಾನಗಲ್ ಠಾಣೆ ಸಿಪಿಐ ಬಸವರಾಜ್ ಹಳಬಣ್ಣನವರ್ ಹಾಗೂ ಪಿಎಸ್ಐ ಸಂಪತ್ ಆನಿಕಿವಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಲೋಕೇಶ್ ಸುಣಗಾರ್, ಪಬ್ಲಿಕ್ ನೆಕ್ಸ್ಟ್, ಹಾನಗಲ್

Edited By : Manjunath H D
PublicNext

PublicNext

02/02/2026 12:54 pm

Cinque Terre

17.25 K

Cinque Terre

0

ಸಂಬಂಧಿತ ಸುದ್ದಿ