ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕೇಂದ್ರ ಬಜೆಟ್ ಮಂಡನೆ, ರಾಜ್ಯಕ್ಕೆ ಸಾಕಷ್ಟು ಅನ್ಯಾಯ - ಸಚಿವ ತಿಮ್ಮಾಪುರ

ಹುಬ್ಬಳ್ಳಿ: ಕೇಂದ್ರ ಸರಕಾರದ ಬಜೆಟ್ ನಿರಾಸೆ ತಂದಿದೆ, ಕೇಂದ್ರ ಸರ್ಕಾರ ರಾಜ್ಯಕ್ಕೆ ಯಾವುದೇ ಅನುಕೂಲಕರ ಯೋಜನೆ ಘೋಷಣೆ ಮಾಡಿಲ್ಲ. ಕರ್ನಾಟಕಕ್ಕೆ ಸಾಕಷ್ಟು ಅನ್ಯಾಯ ಮಾಡಿದೆ ಎಂದು ಸಚಿವ ಆರ್.ಬಿ ತಿಮ್ಮಾಪುರ ಹೇಳಿದರು.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಇವರ ಬಜೆಟ್‌ ನಲ್ಲಿ ರೈತ ಪರ ಯೋಜನೆಗಳು ಇಲ್ಲವೇ ಇಲ್ಲ. ಯುವಕರಿಗೆ ಉದ್ಯೋಗದ ಭರವಸೆ ಇಲ್ಲ. ಎಲ್ಲಿ ಚುನಾವಣೆ ನಡೆಯಲಿದೆಯೋ ಅಲ್ಲಿ ಹೆಚ್ಚಿನ ಅನುದಾನ ಘೋಷಣೆ ಆಗಿದೆ. ಕರ್ನಾಟಕಕ್ಕೆ ಬಹಳ ಅನ್ಯಾಯ ಮಾಡಿದ್ದು ನೋವು ತಂದಿದೆ. ದೇಶದ ಸಮಗ್ರ ಅಭಿವೃದ್ಧಿ ಪರ ಬಜೆಟ್ ಮಂಡನೆ ಆಗಿಲ್ಲ. ತುಂಬಾ ಪಾರ್ಲಿಮೆಂಟ್ ಸದಸ್ಯರು ಆಯ್ಕೆ ಆಗಿದ್ದಾರೆ. ನಾನು ಎಂಪಿಗಳಿಗೆ ಮನವಿ ಮಾಡುವೆ ಹೆಚ್ಚು ಹೆಚ್ಚು ಅನುದಾನ ತರಬೇಕು. ಕೇಂದ್ರದ ಮೇಲೆ ಹೆಚ್ಚು ಒತ್ತಡ ಮಾಡಬೇಕು ಎಂದರು.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

02/02/2026 02:58 pm

Cinque Terre

23.88 K

Cinque Terre

0

ಸಂಬಂಧಿತ ಸುದ್ದಿ