ಕುಂದಗೋಳ : ರೈತಾಪಿ ಜನರಿಗಾಗಿ ಸರ್ಕಾರಿ ಆದೇಶಿಸಿದ ಕಡಲೆ ಖರೀದಿ ಕೇಂದ್ರ ಎಲ್ಲಿದೆ ? ಯಾವಾಗ ನೋಂದಣಿ ? ಯಾವಾಗ ಖರೀದಿ ? ಎಂಬ ಮಾಹಿತಿ ಸ್ಪಷ್ಟವಾಗದ ಹಿನ್ನೆಲೆಯಲ್ಲಿ ರೈತ ಬೆಳೆದ ಕಡಲೆ ಬೆಳೆ ಖಾಸಗಿ ವ್ಯಾಪಾರಿಗಳ ಪಾಲಾಗುತ್ತಿದೆ.
ಧಾರವಾಡ ಜಿಲ್ಲೆಯಾದ್ಯಂತ 2025-26ನೇ ಸಾಲಿನಲ್ಲಿ ಹಿಂಗಾರು ಎಫ್.ಎ. ಕ್ಯೂ ಗುಣಮಟ್ಟದ ಕಡಲೆ ಬೆಳೆದ ರೈತರ ಬೆಳೆ ಖರೀದಿ ಮತ್ತು ನೋಂದಣಿಗೆ ಜನವರಿ.29 ಆದೇಶ ಹೊರಬಿದ್ದಿದೆ.
ಅದರಂತೆ ಕುಂದಗೋಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವ್ಯಾಪ್ತಿಯಲ್ಲಿ 6 ಕಡಲೆ ಖರೀದಿ ಕೇಂದ್ರಕ್ಕೆ ಆದೇಶ ನೀಡಿದ್ದರೂ, ಇಂದಿಗೂ ಖರೀದಿ ಕೇಂದ್ರ ತೆರೆದಿಲ್ಲ, ನೋಂದಣಿ ಅರ್ಜಿ ಸ್ವೀಕಾರ ನಡೆದಿಲ್ಲ.
ಈ ಪರಿಣಾಮ ಕುಂದಗೋಳ ಸಹಾಯಕ ಕೃಷಿ ನಿರ್ದೇಶಕ ಮಾಹಿತಿಯಂತೆ ಕುಂದಗೋಳ ತಾಲೂಕಿನಾದ್ಯಂತ 25000 ಹೆಕ್ಟೇರ್ ಕಡಲೆ ಬೆಳೆದ ರೈತರು ಖರೀದಿ ಕೇಂದ್ರದ ಆರಂಭ ವಿಳಂಬವಾದ ಹಿನ್ನೆಲೆಯಲ್ಲಿ ಬೆಳೆಗಾಗಿ ಮಾಡಿದ ಖರ್ಚು, ವೆಚ್ಚ, ಸಾಲ ಭರಿಸಲು ಖಾಸಗಿ ವರ್ತಕರಿಗೆ ಕಡಲೆ ಬೆಳೆ ಮಾರಾಟ ಮಾಡುವ ಸಮಸ್ಯೆ ಏರ್ಪಟ್ಟಿದೆ.
ಪ್ರತಿ ಕ್ವಿಂಟಾಲ್ ಎಫ್.ಎ.ಕ್ಯೂ ಗುಣಮಟ್ಟದ ಕಡಲೆಗೆ ಖರೀದಿಗೆ ₹5875 ರೂಪಾಯಿ ನೀಡಲು ಸರ್ಕಾರ ಆದೇಶ ಮಾಡಿ ಜನವರಿ.29 ರಿಂದ ನೋಂದಣಿ ಮತ್ತು ಖರೀದಿಗೆ ಸೂಚಿಸಿದ್ದರು ಯಾವುದೇ ಪ್ರಕ್ರಿಯೆ ನಡೆದಿಲ್ಲ.
ಈ ಬಗ್ಗೆ ಕುಂದಗೋಳ ಎಪಿಎಂಸಿ ಪ್ರಭಾರಿ ಕಾರ್ಯದರ್ಶಿ ಎಸ್.ಎನ್.ವಿನಯ ಅವರನ್ನೂ ಕೇಳಿದರೆ ಯೂಸರ್ ಐಡಿ ವಿಷಯವಾಗಿ ಖರೀದಿ ಮತ್ತು ನೋಂದಣಿ ವಿಳಂಬ ಆಗಿದೆ ಎನ್ನುತ್ತಾರೆ.
ಈ ಬಗ್ಗೆ ಸಂಬಂಧಪಟ್ಟ ಜಿಲ್ಲಾಧಿಕಾರಿಗಳು, ಶಾಸಕರು ಗಮನಿಸಿ ರೈತ ಬೆಳೆದ ಕಡಲೆ ಬೆಳೆ ಖಾಸಗಿ ವ್ಯಾಪಾರಿಗಳ ಪಾಲಾಗುವ ಮೊದಲು ಖರೀದಿ ಕೇಂದ್ರ ತೆರೆಯುವಂತೆ ಜನರು ಒತ್ತಾಯ ಮಾಡಿದ್ದಾರೆ.
-ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
03/02/2026 04:24 pm
LOADING...