ಅಳ್ನಾವರ: ಅರವಟಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಡಿ ಸುಮಾರು ಆರು ಹಳ್ಳಿಗಳ ರೈತರಿಗೆ ಅತೀ ಅವಶ್ಯಕ ಆಗಿರುವ ಹಾಗೂ ಬಹು ಬೇಡಿಕೆಯ ಪಶು ಆಸ್ಪತ್ರೆ ಇಂದು ಅರವಟಗಿಯಲ್ಲಿ ಅನಾವರಣಗೊಂಡಿತು.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನದಲ್ಲಿ ಸುಮಾರು 49 ಲಕ್ಷ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡವು ತಲೆ ಎತ್ತಿದೆ. ಕಟ್ಟಡದ ನಿರ್ಮಾಣವು ಗುಣಮಟ್ಟದಿಂದ ಕೂಡಿದೆ.
ಭಾರತವು ಹೈನು ಉತ್ಪಾದನೆಯಲ್ಲಿ ಮೊದಲ ಸ್ಥಾನ ಪಡೆದಿದೆ. ದೇಶದ ಬೆನ್ನೆಲುಬು ರೈತನಾದರೆ, ರೈತರ ಬೆನ್ನೆಲುಬು ಪಶುಗಳು. ಇವುಗಳನ್ನ ಕಾಪಾಡಲು ಪಶು ಆಸ್ಪತ್ರೆಗಳು ಬಹಳ ಆವಶ್ಯಕ ಎಂದು ಅಶೋಕ ಜೋಡಟ್ಟಿ ಹೇಳಿದರು.
ಬೈಟ್:ಅಶೋಕ ಜೋಡಟ್ಟಿ. (ಅಧ್ಯಕ್ಷರು ಅರವಟಗಿ ಗ್ರಾ.ಪಂ)
ಬಹು ವೆಚ್ಚದಲ್ಲಿ ಕಟ್ಟಡವೇನೋ ನಿರ್ಮಾಣವಾಗಿದೆ. ಆದ್ರೆ ಹಿರಿಯ ಪಶು ವೈದ್ಯ ಪರೀಕ್ಷಕರ ಅವಶ್ಯಕತೆ ಇದೆ. ಪ್ರಾಥಮಿಕ ಪಶು ಆಸ್ಪತ್ರೆಯನ್ನ ಪಶು ಚಿಕಿತ್ಸಾಲಯಕ್ಕೆ ಮೇಲ್ದರ್ಜೆಗೇರಿಸಿದರೆ ಗುಣ ಮಟ್ಟದ ಸೇವೆಯನ್ನ ನೀಡಲು ಸಾಧ್ಯ. ಇಲ್ಲದಿದ್ದರೆ ಹೆಸರಿಗಷ್ಟೇ ಪಶು ಆಸ್ಪತ್ರೆ ಯಾಗುವುದರಲ್ಲಿ ಸಂಶಯವಿಲ್ಲ.
ಮಹಾಂತೇಶ ಪಠಾಣಿ, ಪಬ್ಲಿಕ್ ನೆಕ್ಸ್ಟ್ ಅಳ್ನಾವರ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
02/02/2026 05:38 pm
LOADING...