ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ತುಪ್ಪದ ಕುರಹಟ್ಟಿಯಲ್ಲಿ ಕಡಲೆ ತಳಿ 'ಬಿ.ಜಿ.ಡಿ 111-1' ಕ್ಷೇತ್ರೋತ್ಸವ ಯಶಸ್ವಿ

ಅಣ್ಣಿಗೇರಿ: ತಾಲ್ಲೂಕಿನ ತುಪ್ಪದ ಕುರಹಟ್ಟಿ ಗ್ರಾಮದ ಪ್ರಗತಿಪರ ರೈತ ಕೃಷ್ಣರಡ್ಡಿ ಸಾಸ್ವಿಹಳ್ಳಿ ಅವರ ಜಮೀನಿನಲ್ಲಿ ಹಮ್ಮಿಕೊಳ್ಳಲಾಗಿದ್ದ 'ಬಿ.ಜಿ.ಡಿ 111-1' (BGD 111-1) ಸುಧಾರಿತ ಕಡಲೆ ದೇಶಿ ತಳಿಯ ಕ್ಷೇತ್ರೋತ್ಸವವು ಸುತ್ತಮುತ್ತಲಿನ ರೈತರ ಗಮನ ಸೆಳೆಯಿತು.

ಈ ಸಂದರ್ಭದಲ್ಲಿ ಅಣ್ಣಿಗೇರಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳಾದ ವೀರಣ್ಣ ಗಡಾದ ರೈತರಿಗೆ ಯೋಜನೆ ಉದ್ದೇಶದ ಕುರಿತು ಹಾಗೂ ಸುಧಾರಿತ ಬೀಜೋಪಚಾರ ಮತ್ತು ಸಮಗ್ರ ಪೀಡೆ ನಿರ್ವಹಣೆಯ ಬಗ್ಗೆ ತಾಂತ್ರಿಕ ಮಾಹಿತಿ ನೀಡಿದರು. ಕಾರ್ಯಕ್ರಮದ ಕೊನೆಯಲ್ಲಿ ರೈತರು ಬೆಳೆಯ ಕ್ಷೇತ್ರ ವೀಕ್ಷಣೆ ಮಾಡಿ ಮಾಹಿತಿ ಪಡೆದರು.

ಈ ವೇಳೆ ಕೃಷಿ ವಿಜ್ಞಾನಿಗಳು ಕ್ಷೇತ್ರೋತ್ಸವದಲ್ಲಿ ಮಾತನಾಡಿದ "ಬಿ.ಜಿ.ಡಿ 111-1 ತಳಿಯು ಒಣ ಬೇಸಾಯಕ್ಕೆ ಹೇಳಿ ಮಾಡಿಸಿದಂತಿದೆ. ರೈತರು ಬೀಜೋಪಚಾರಕ್ಕೆ ವಿಶೇಷವಾಗಿ ಜೈವಿಕ (ಸುಡೋಮೊನಾಸ್ ಫ್ಲುರೆಸೆನ್ಸ)ಹೆಚ್ಚಿನ ಆದ್ಯತೆ ನೀಡುವುದರ ಜೊತೆಗೆ, ಸಾಲಿನಿಂದ ಸಾಲಿಗೆ ಸರಿಯಾದ ಅಂತರ ಕಾಯ್ದುಕೊಂಡರೆ ಇನ್ನೂ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯ" ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ರವೀಂದ್ರಗೌಡ ಪಾಟೀಲ: ತಾಲ್ಲೂಕು ಕೃಷಿ ಸಹಾಯಕ ನಿರ್ದೇಶಕರು ಅಣ್ಣಿಗೇರಿ,ಮಂಜುನಾಥ ದ್ಯಾವನೂರ, ಆತ್ಮಾ ಸಿಬ್ಬಂದಿ ಶಶಿಧರ ಮೇಟಿ, ಕೃಷಿ ಸಂಜಿವಿನಿ ಸಿಬ್ಬಂದಿ ತಂಗೆವ್ವ ಗಾಣಿಗೇರ ಸೇರಿದಂತೆ ಗ್ರಾಮದ ಮುಖಂಡರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

31/01/2026 08:24 am

Cinque Terre

18.59 K

Cinque Terre

0

ಸಂಬಂಧಿತ ಸುದ್ದಿ