ಕುಂದಗೋಳ : ತೋಟಗಾರಿಕೆ ಮೆಣಸಿನಕಾಯಿ ಬೆಳೆಯಲ್ಲಿ ಹೆಸರುವಾಸಿಯಾದ ಕುಂದಗೋಳ ತಾಲೂಕಿನ ರೈತರು ಇದೀಗ ತಮ್ಮ ಬೆಳೆ ರಕ್ಷಣೆಗೆ ಸೋಲಾರ್ ಸಿಸಿ ಕ್ಯಾಮೆರಾ ಮೊರೆ ಹೋಗಿದ್ದಾರೆ.
ಪ್ರಸ್ತುತ ವರ್ಷ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಕುಂದಗೋಳ, ಸಂಶಿ ಹೋಬಳಿ ವ್ಯಾಪ್ತಿಯಲ್ಲಿ 1620 ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆಯಲಾಗಿದೆ.
ಹೀಗೆ ಬೆಳೆದ ಮೆಣಸಿನಕಾಯಿಗೆ ಕ್ವಿಂಟಾಲ್‌ಗೆ 70.000 ಸಾವಿರಕ್ಕೂ ಹೆಚ್ಚಿನ ಬೆಲೆಗೆ ಬೇಡಿಕೆ ಕೇಳಿ ಬಂದ ಹಿನ್ನೆಲೆಯಲ್ಲಿ ಜಮೀನಿನಲ್ಲಿ ಬೆಳೆಗಳು ರಕ್ಷಣೆ ರೈತರಿಗೆ ಸವಾಲಾಗಿ ಗುಡಗೇರಿ ಗ್ರಾಮದ ರೈತ ಶಂಕ್ರಯ್ಯ ಗದಗಿನಮಠ ಅವರು ತಮ್ಮ 2 ಎಕರೆ ಜಮೀನಿನಲ್ಲಿ ಸೋಲಾರ್ ಸಿಸಿ ಕ್ಯಾಮರಾ ಅಳವಡಿಸಿ ಕಾವಲು, ರಕ್ಷಣೆ ಎರಡನ್ನೂ ಮನೆಯಲ್ಲಿ ಕುಳಿತು ನಿರ್ವಹಣೆ ಮಾಡುತ್ತಿದ್ದಾರೆ.
ಒಟ್ಟಾರೆ ಬ್ಯಾಡಗಿ, ಕಡ್ಡಿ, ದೇವನೂರು, ಸರ್ಪನ್, ಡಬ್ಬಿ, ಗುಂಟೂರು ವಿವಿಧ ತಳಿಯ ಮೆಣಸಿನಕಾಯಿ ಬೆಳೆಯನ್ನು ರೈತರು ಬೆಳೆದಿದ್ದು ಬೆಳೆ ಉಳಿಸಿಕೊಳ್ಳಲು ಅಷ್ಟೇ ಮುತುವರ್ಜಿ ವಹಿಸಿದ್ದಾರೆ.
-ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
27/01/2026 09:39 pm
LOADING...