ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಇಇ ಸತ್ಯನಾರಾಯಣ ನಿವಾಸದ ಮೇಲೆ ಲೋಕಾಯುಕ್ತ ದಾಳಿ – ಬಾಗಿಲು ತೆರೆಯದೆ ಸತಾಯಿಸಿದ ಅಧಿಕಾರಿ!

ಹಾಸನ : ಜಿಲ್ಲೆಯ ಲೋಕಾಯುಕ್ತ ಅಧಿಕಾರಿಗಳು ಇಂದು ಬೆಳ್ಳಂಬೆಳಿಗ್ಗೆ ಭ್ರಷ್ಟಾಚಾರದ ವಿರುದ್ಧ ಸಮರ ಸಾರಿದ್ದು, ಮಹಾನಗರ ಪಾಲಿಕೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ (AEE) ಸತ್ಯನಾರಾಯಣ ಅವರಿಗೆ ಶಾಕ್ ನೀಡಿದ್ದಾರೆ. ಹಾಸನ ನಗರದ ರವೀಂದ್ರ ನಗರದಲ್ಲಿರುವ ಸತ್ಯನಾರಾಯಣ ಅವರ ನಿವಾಸದ ಮೇಲೆ,ಲೋಕಾಯುಕ್ತ ಡಿವೈಎಸ್ಪಿ ಸುರೇಶ್ ಅವರ ನೇತೃತ್ವದ ತಂಡದಿಂದ ಕಾರ್ಯಾಚರಣೆ ನಡೆಸಲಾಗಿದೆ.

ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಮಾಡಿರುವ ದೂರಿನ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ.ಅಧಿಕಾರಿಗಳು ದಾಳಿ ನಡೆಸಿದ ವೇಳೆ ಎಇಇ ಸತ್ಯನಾರಾಯಣ ಅವರು ದೀರ್ಘಕಾಲ ಮನೆ ಬಾಗಿಲು ತೆರೆಯದೆ ಅಧಿಕಾರಿಗಳನ್ನು ಸತಾಯಿಸಿದ್ದಾರೆ.

ಇದರಿಂದಾಗಿ ಲೋಕಾಯುಕ್ತ ತಂಡವು ಮನೆ ಬಾಗಿಲ ಮುಂದೆಯೇ ಠಿಕಾಣಿ ಹೂಡುವಂತಾಯಿತು. ಅಂತಿಮವಾಗಿ ಬಾಗಿಲು ತೆರೆಸುವಲ್ಲಿ ಯಶಸ್ವಿಯಾದ ಅಧಿಕಾರಿಗಳು, ಪ್ರಸ್ತುತ ಆಸ್ತಿಪಾಸ್ತಿ ಮತ್ತು ಮಹತ್ವದ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.

ಜಿಲ್ಲೆಯಲ್ಲಿ ಈ ದಾಳಿಯು ಭ್ರಷ್ಟ ಅಧಿಕಾರಿಗಳ ನಿದ್ದೆಗೆಡಿಸಿದ್ದು, ಪರಿಶೀಲನೆಯ ನಂತರ ಹೆಚ್ಚಿನ ಮಾಹಿತಿ ಹೊರಬರಬೇಕಿದೆ.

Edited By :
PublicNext

PublicNext

05/03/2026 09:15 am

Cinque Terre

14.25 K

Cinque Terre

0

ಸಂಬಂಧಿತ ಸುದ್ದಿ