ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾಸನ: ಕಮರ್ಷಿಯಲ್ ಸಿಲಿಂಡರ್ ಗೆ ಹಾಹಾಕಾರ!

ಹಾಸನ: ಮಧ್ಯ ಪ್ರಾಚ್ಯ ರಾಷ್ಟ್ರಗಳ ಯುದ್ಧ ಪ್ರಭಾವದಿಂದಾಗಿ ಭಾರತದಲ್ಲಿ ಗ್ಯಾಸ್ ಸಿಲಿಂಡರ್ ಗಳ ಸಮಸ್ಯೆ ಎದುರಾಗಿದ್ದು, ಈ ಬಿಸಿ ಹೋಟೆಲ್‌ಗಳಿಗೂ ತಟ್ಟಿದೆ.

ಹಾಸನದಲ್ಲೂ ಹೋಟೆಲ್‌ಗಳಲ್ಲಿ ಗ್ಯಾಸ್ ಇಲ್ಲದ್ದರಿಂದ ಹೋಟೆಲ್ ಮಾಲೀಕರು ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ ಸಮಸ್ಯೆ ಬಗೆಹರಿಸುವಂತೆ ಮನವಿ ಸಲ್ಲಿಸಿದ್ದಾರೆ.

ಇನ್ನು ಮೂರು ದಿನ ಕಳೆದರೆ ಹೋಟೆಲ್ ಬಂದ್ ಮಾಡಬೇಕಾಗುತ್ತದೆ, ಕಮರ್ಷಿಯಲ್ ಗ್ಯಾಸ್ ಸಿಗದೇ ಈಗಾಗಲೇ ನಾವು ಸಿಬ್ಬಂದಿಯನ್ನು ಉಳಿಸಿಕೊಳ್ಳುವುದಕ್ಕೆ ಆಗುತ್ತಿಲ್ಲ,

ಕೇವಲ ದಿನಕ್ಕೆ ಒಂದು ಸಿಲಿಂಡರ್ ಕೊಟ್ಟರೆ ಸಾಕು, ಹೇಗಾದರೂ ಹೋಟೆಲ್ ನಡೆಸುತ್ತೇವೆ ಎಂದು ಕೇಳಿಕೊಂಡಿದ್ದಾರೆ.

Edited By : Vinayak Patil
PublicNext

PublicNext

20/03/2026 08:19 am

Cinque Terre

18.71 K

Cinque Terre

0

ಸಂಬಂಧಿತ ಸುದ್ದಿ