ಹಾಸನ : ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಲಕ್ಷಾಂತರ ಅಮಾಯಕರು ಬಲಿಯಾಗುತ್ತಿದ್ದು, ಪರಿಸರ ಮತ್ತು ಮಾನವ ಕುಲಕ್ಕೆ ಭಾರೀ ಹಾನಿಯಾಗುತ್ತಿದೆ. ವಿಶ್ವಸಂಸ್ಥೆಯು ತಕ್ಷಣ ಮಧ್ಯಪ್ರವೇಶಿಸಿ ಯುದ್ಧಗಳನ್ನು ನಿಲ್ಲಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು," ಎಂದು ಒತ್ತಾಯಿಸಿ ಪರಿಸರ-ಜನಪರ ಸಂಘಟನೆ ಇಂದು ಜಿಲ್ಲಾಡಳಿತದ ಮೂಲಕ ಮನವಿ ಸಲ್ಲಿಸಿತು.
ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಜಮಾಯಿಸಿದ ಸಂಘಟನೆಯ ಪದಾಧಿಕಾರಿಗಳು, ಶಾಂತಿ ಪ್ರತಿಪಾದಿಸುವ ಘೋಷಣೆಗಳನ್ನು ಕೂಗಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ಮುಖಂಡರು, ಯುದ್ಧಗಳು ಕೇವಲ ದೇಶಗಳ ನಡುವಿನ ಸಂಘರ್ಷವಲ್ಲ, ಅವು ಮಾನವೀಯತೆಯ ಮೇಲಿನ ದಾಳಿ. ಮಹಿಳೆಯರು ಮತ್ತು ಮಕ್ಕಳು ಅತಿ ಹೆಚ್ಚು ಸಂಕಷ್ಟಕ್ಕೆ ಈಡಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
Kshetra Samachara
11/03/2026 05:34 pm
LOADING...