ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾಸನ: ಗೃಹಬಳಕೆಯ ಸಿಲಿಂಡರ್ ಕೊರತೆ ಇಲ್ಲ - ಡಿಸಿ ಲತಾಕುಮಾರಿ ಸ್ಪಷ್ಟನೆ

ಹಾಸನ: ಹಾಸನ ಜಿಲ್ಲೆಯಲ್ಲಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಯಾವುದೇ ಕೊರತೆ ಇಲ್ಲ ಎಂದು ಜಿಲ್ಲಾಧಿಕಾರಿ ಕೆ. ಎಸ್ ಲತಾಕುಮಾರಿ ತಿಳಿಸಿದ್ದಾರೆ.

ಮಾಧ್ಯಮಕ್ಕೆ ಮಾಹಿತಿ ನೀಡಿ, ಜಿಲ್ಲೆಯಲ್ಲಿ ಒಟ್ಟು 6 ಲಕ್ಷ 29 ಸಾವಿರ ಗ್ರಾಹಕರು ಸಿಲಿಂಡರ್ ಬಳಸುತ್ತಿದ್ದು, ಅದರಲ್ಲಿ 5576 ಕಮರ್ಷಿಯಲ್ ಸಂಪರ್ಕಗಳಿವೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಗ್ಯಾಸ್ ಪೂರೈಕೆ ಸಮರ್ಪಕವಾಗಿದ್ದು, ಯಾವುದೇ ತೊಂದರೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಹಾಸನ ಜಿಲ್ಲೆಯಲ್ಲಿ ಹೆಚ್.ಪಿ.ಸಿ.ಎಲ್. ಬಿಪಿಸಿಎಲ್ ಹಾಗೂ ಈಓಸಿಎಲ್ ಸಂಸ್ಥೆಗಳಡಿ ೩೪ ಡೀಲರ್‌ಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಗ್ಯಾಸ್ ಬುಕಿಂಗ್ ಮತ್ತು ಡೆಲಿವರಿ ನಿಯಮಿತವಾಗಿ ನಡೆಯುತ್ತಿದ್ದು, ಗ್ರಾಹಕರಿಗೆ ಸಮಯಕ್ಕೆ ಸರಿಯಾಗಿ ಸಿಲಿಂಡರ್ ದೊರೆಯುತ್ತಿದೆ.

ಒಮ್ಮೆ ಬುಕಿಂಗ್ ಮಾಡಿದ ನಂತರ 25 ದಿನಗಳವರೆಗೆ ಮರುಬುಕಿಂಗ್ ಮಾಡಲು ಅವಕಾಶ ಇರುವುದಿಲ್ಲ ಎಂಬ ನಿಯಮ ಮುಂದುವರಿದಿದೆ. ಗೃಹಬಳಕೆಯ ಸಿಲಿಂಡರ್ ಪೂರೈಕೆಗೆ ಮೊದಲ ಆದ್ಯತೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಹೇಳಿದರು. ಹೋಟೆಲ್ ಮಾಲೀಕರು ಸಹ ಇನ್ನೊಂದು ವಾರ ಮಿತವಾಗಿ ಸಿಲಿಂಡರ್ ಬಳಕೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಈಗಾಗಲೇ ಸಂಬಂಧಿತ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪರಿಸ್ಥಿತಿಯನ್ನು ಸಮೀಕ್ಷೆ ಮಾಡಲಾಗಿದೆ. ಗ್ರಾಹಕರು ಬಿಲ್ಲಿಂಗ್ ದರದ ಪ್ರಕಾರವೇ ಹಣ ಪಾವತಿಸಬೇಕು. ಯಾರಾದರೂ ಹೆಚ್ಚುವರಿ ಹಣ ಕೇಳಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಯಾವುದೇ ಸಮಸ್ಯೆ ಎದುರಾದಲ್ಲಿ ಜಿಲ್ಲಾಡಳಿತದ ಗಮನಕ್ಕೆ ತರಬಹುದು. ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

Edited By : PublicNext Desk
Kshetra Samachara

Kshetra Samachara

19/03/2026 07:46 pm

Cinque Terre

140

Cinque Terre

0

ಸಂಬಂಧಿತ ಸುದ್ದಿ