ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗುಂಡ್ಲುಪೇಟೆ: ಬೇರಂಬಾಡಿಯಲ್ಲಿ ಕಳ್ಳರ ಕೈಚಳಕ - ಸ್ಟಾಟರ್ ಜೊತೆ ಕೃಷಿ ಪರಿಕರಗಳ ಕಳ್ಳತನ

ಗುಂಡ್ಲುಪೇಟೆ : ತಡರಾತ್ರಿ ರೈತನ ಜಮೀನಿಗೆ ನುಗ್ಗಿದ ಕಳ್ಳರು ಕೃಷಿ ಪರಿಕರಗಳು ಹಾಗೂ ಸ್ಟಾಟರ್, ಬ್ಯಾಟರಿ ಒಳಗೊಂಡಂತೆ ಮೆಣಸಿನ ಪೈರುಗಳನ್ನ ನಾಶಪಡಿಸಿರುವ ಘಟನೆ ತಾಲೂಕಿನ ಬೇರಂಬಾಡಿ ಗ್ರಾಮದಲ್ಲಿ ನಡೆದಿದೆ.

ಬೇರಂಬಾಡಿ ಗ್ರಾಮದ ಸಿದ್ದರಾಜಪ್ಪ ಎಂಬವರ ಜಮೀನಿನಲ್ಲಿ ಘಟನೆ ನಡೆದಿದ್ದು ಯಂತ್ರದ ಜೊತೆಗೆ ಕೃಷಿ ಪರಿಕರಗಳನ್ನು ಸಹ ಕಳವು ಮಾಡಿರುವ ದುಷ್ಕರ್ಮಿಗಳ ಉಪಟಳದಿಂದ ರೈತರು ಬೇಸತ್ತು ಹೋಗಿದ್ದು ಸಾಕಷ್ಟು ನಷ್ಟಕ್ಕೆ ಸಿಲುಕಿದ್ದಾರೆ ಆದುದರಿಂದ ಕಳ್ಳರನ್ನ ಪತ್ತೆ ಹಚ್ಚಿ ಕಾನೂನು ರೀತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಗುಂಡ್ಲುಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಶಿವಕುಮಾರ್ ಪಬ್ಲಿಕ್ ನೆಕ್ಸ್ಟ್ ಗುಂಡ್ಲುಪೇಟೆ

Edited By : Vinayak Patil
PublicNext

PublicNext

05/03/2026 04:57 pm

Cinque Terre

14.89 K

Cinque Terre

0

ಸಂಬಂಧಿತ ಸುದ್ದಿ