ಚಾಮರಾಜನಗರ : ಗಂಡ ಹಾಗೂ ಅತ್ತೆ ಕಿರುಕುಳದಿಂದ ಬೇಸತ್ತು ಗೃಹಿಣಿಯೊಬ್ಬಳು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಅಮಚವಾಡಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಪಲ್ಲವಿ (30) ಮೃತ ಮಹಿಳೆ. ಈಕೆಯ ಪತಿ ಮಹೇಶ್ ಹಾಗೂ ಅತ್ತೆ ಚಿಕ್ಕತಾಯಮ್ಮ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ತಾಲೂಕಿನ ಚಂದುಕಟ್ಟೆಮೋಳೆ ಗ್ರಾಮದ ಸಿದ್ದಶೆಟ್ಟಿ ಎಂಬವರ ಮಗಳಾದ ಪಲ್ಲವಿಯನ್ನು ಅಮಚವಾಡಿ ಗ್ರಾಮದ ಮಹೇಶ್ ಎಂಬವರ ಜತೆ ವಿವಾಹ ಮಾಡಲಾಗಿತ್ತು. ಈ ದಂಪತಿಗೆ ಒಂದು ವರ್ಷದ ಮಗು ಕೂಡಾ ಇದೆ.
ಕೆಲವು ದಿನಗಳಿಂದ ಗಂಡ ಕುಡಿದು ಬಂದು ಹಿಂಸೆ ನೀಡುತ್ತಿದ್ದ ಹಾಗೂ ಅತ್ತೆ ಕೂಡಾ ಕಿರುಕುಳ ಕೊಡುತ್ತಿದ್ದಳು. ಇದರಿಂದಾಗಿ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತಳ ತಂದೆ ಸಿದ್ದಶೆಟ್ಟಿ ದೂರಿನಲ್ಲಿ ತಿಳಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
05/03/2026 05:51 pm
LOADING...