ಮಡಿಕೇರಿ: ಗುಂಡು ಹೊಡೆದುಕೊಂಡು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ. ಮೂಲತಃ ಭಾಗಮಂಡಲದ ತಾವೂರು ನಿವಾಸಿ, ಮಡಿಕೇರಿಯ ಹಿಮವನ ಲೇಔಟ್ ನಲ್ಲಿ ನೆಲೆಸಿದ್ದ ಅಮೆಮನೆ ದೇವಿಪ್ರಸಾದ್ ( 43) ಮೃತ ವ್ಯಕ್ತಿ.
ಬೆನ್ನುಹುರಿ ಸಮಸ್ಯೆಯಿಂದ ಬಳಲುತ್ತಿದ್ದ ದೇವಿಪ್ರಸಾದ್ ಬುಧವಾರ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದು, ಗುರುವಾರ ಮಧ್ಯಾಹ್ನ ಸುಮಾರು 3:45 ರ ಸುಮಾರಿಗೆ ಮಡಿಕೇರಿಯ ಹಿಮವನ ಲೇಔಟ್ ನಲ್ಲಿರುವ ತಮ್ಮ ನಿವಾಸದ ಮುಂಭಾಗದ ರಸ್ತೆಯಲ್ಲಿ ಒಂಟಿ ನಳಿಕೆ ಕೋವಿಯಿಂದ ಕುತ್ತಿಗೆ ಭಾಗಕ್ಕೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸ್ಥಳಕ್ಕೆ ಕೊಡಗು ಎಸ್.ಪಿ. ಬಿಂದುಮಣಿ, ಡಿವೈಎಸ್ಪಿ ಸೂರಜ್, ಇನ್ಸ್‌ಪೆಕ್ಟರ್ ರಾಜು, ನಗರ ಠಾಣೆ ಎಸ್.ಐ ಅನ್ನಪೂರ್ಣ ಭೇಟಿ, ಪರಿಶೀಲನೆ ನಡೆಸಿದರು. ಮೃತ ದೇವಿಪ್ರಸಾದ್ ಪತ್ನಿ ಹಾಗೂ 5 ವರ್ಷದ ಗಂಡು ಮಗುವನ್ನು ಅಗಲಿದ್ದಾರೆ.
PublicNext
05/03/2026 09:50 pm
LOADING...