ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಡಗು: ಕುಂದಚೇರಿ ಗ್ರಾಮದಲ್ಲಿ ಇಬ್ಬರ ಬರ್ಬರ ಹತ್ಯೆ

ಮಡಿಕೇರಿ: ಮದ್ಯದ ಅಮಲಿನಲ್ಲಿ ವ್ಯಕ್ತಿಯೋರ್ವ ಈರ್ವರನ್ನು ಕತ್ತಿಯಿಂದ ಕಡಿದು ಹತ್ಯೆ ಮಾಡಿರುವ ಘಟನೆ ಕೊಡಗು ಜಿಲ್ಲೆ ಭಾಗಮಂಡಲ ಪೊಲೀಸ್ ಠಾಣಾ ವ್ಯಾಪ್ತಿಯ ಕುಂದಚೇರಿ ಗ್ರಾಮದ ಕಾನಕಂಡಿ ಎಂಬಲ್ಲಿ ನಡೆದಿದೆ.

ಕುಂದಚೇರಿ ಗ್ರಾಮದ ಕಾನಕಂಡಿ ಪರಿಶಿಷ್ಟರ ಕಾಲೋನಿಯಲ್ಲಿ ವಾಸವಿದ್ದ ಯಶೋಧ (50) ಹಾಗೂ ಕುಂಞರಾಮ(55) ಎಂಬವರುಗಳೇ ಹತ್ಯೆಗೀಡಾದ ದುರ್ದೈವಿಗಳು.

ಚಂದು (60) ಎಂಬಾತ ಹತ್ಯೆ ಮಾಡಿದ ಆರೋಪಿಯಾಗಿದ್ದು, ಭಾಗಮಂಡಲ ಪೊಲೀಸರು ಆತನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ ಅಡಿಯ ಜನಾಂಗಕ್ಕೆ ಸೇರಿದ ಇವರುಗಳು ಸಂಬಂಧಿಕರಾಗಿದ್ದು, ಅವಿವಾಹಿತಳಾಗಿರುವ ಯಶೋಧ ತನ್ನ ತಾಯಿ ಬೆಳ್ಳಕ್ಕಿಯೊಂದಿಗೆ ನೆಲೆಸಿದ್ದಳು. ಸಂಬಂಧಿಕರಾಗಿದ್ದ ಕುಂಞಿರಾಮ ಹಾಗೂ ಯಶೋಧ ಅವರೊಂದಿಗೆ ಸಂಬಂಧವಿದ್ದಿತು. ಇದು ಯಶೋಧಳ ದೊಡ್ಡಪ್ಪನ ಮಗ ಚಂದುವಿಗೆ ಇಷ್ಟವಿರಲಿಲ್ಲ. ಈ ಬಗ್ಗೆ ಆಗಾಗ್ಗೆ ಜಗಳವಾಗುತ್ತಿತ್ತು.

ಖಾಸಗಿ ತೋಟದ ಕೆಲಸಕ್ಕೆ ಹೋಗುತ್ತಿದ್ದವರು ಇಂದು ಸಂಬಂಧಿಕರ ಮಗುವಿನ ನಾಮಕರಣ ಸಮಾರಂಭಕ್ಕೆ ಹೋಗಿ ಮನೆಗೆ ಬಂದಿದ್ದಾರೆ. ಯಶೋಧ ಹಾಗೂ ಕುಂಞಿರಾಮ ಮನೆಯಲ್ಲಿ ಮಲಗಿದ್ದ ಸಂದರ್ಭ ಕತ್ತಿಯೊಂದಿಗೆ ಮನೆಗೆ ನುಗ್ಗಿದ ಚಂದು ಈರ್ವರನ್ನು ಕತ್ತಿಯಿಂದ ಕಡಿದಿದ್ದಾನೆ. ತೀವ್ರ ಗಾಯಗಳೊಂದಿಗೆ ರಕ್ತಸ್ರಾವಗೊಂಡು ಈರ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಘಟನೆ ಬಳಿಕ ಮನೆಯೊಳಗಿನಿಂದ ಹೊರಬರುತ್ತಿದ್ದ ಚಂದುವನ್ನು ಗಮನಿಸಿದ ಅಕ್ಕಪಕ್ಕದವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಭಾಗಮಂಡಲ ಪೊಲೀಸರು ಚಂದುವನ್ನು ಬಂಧಿಸಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಅವರು ಭೇಟಿ ನೀಡಿ ಪರಿಶೀಲನೆ ಮಾಡಿದರು. ಅಕ್ರಮ ಸಂಬಂಧ ಕೊಲೆಗೆ ಕಾರಣವೆಂದು ಅವರು ಮಾಹಿತಿ ನೀಡಿದ್ದಾರೆ.

Edited By :
PublicNext

PublicNext

12/03/2026 04:53 pm

Cinque Terre

9.91 K

Cinque Terre

0