ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಹಿಳೆಯರಿಂದ ಸೀರೆ ಓಟ : ರಸ್ತೆಯಲ್ಲೇ ಸಾವಿರಾರು ನಾರಿಯರ ರನ್ನಿಂಗ್ ಸ್ಪರ್ಧೆ...!

ಮಂಗಳೂರು: ಭಾನುವಾರ ಮುಂಜಾನೆ ಮಂಗಳೂರು ನಗರದ ಸಿಟಿ ಸೆಂಟರ್ ರಸ್ತೆಗಳು ಬಣ್ಣಬಣ್ಣದ ಆಕರ್ಷಕ ಸೀರೆಗಳನ್ನುಟ್ಟ ಸಾವಿರಾರು ಮಹಿಳೆಯರಿಂದ ತುಂಬಿ ಹೋಗಿದ್ದವು. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಖಾಸಗಿ ಸಂಸ್ಥೆಗಳ ಆಶ್ರಯದಲ್ಲಿ ಆಯೋಜಿಸಿದ್ದ 3 ಕಿ.ಮೀ ಸೀರೆ ಓಟದಲ್ಲಿ ಸುಮಾರು ಸಾವಿರಕ್ಕೂ ಅಧಿಕ ಮಹಿಳೆಯರು ಪಾಲ್ಗೊಂಡು ತಮ್ಮ ದೈಹಿಕ ಕ್ಷಮತೆಯನ್ನು ಪ್ರದರ್ಶಿಸಿದರು.

ಜೀವಮಾನವಿಡೀ ಕುಟುಂಬದವರ ಯೋಗಕ್ಷೇಮಕ್ಕೆ ಒತ್ತು ನೀಡುತ್ತಿದ್ದ ಇವರು, ಒಂದು ದಿನ ತಮ್ಮ ಬಿಡುವಿಲ್ಲದ ದಿನಚರಿಯಿಂದ ವಿರಾಮ ಪಡೆದು, ತಮ್ಮ ಶಕ್ತಿ ಮತ್ತು ಉತ್ಸಾಹವನ್ನು ಸಾಬೀತುಪಡಿಸಿದರು. ಮಂಗಳೂರಿನ ವಿವಿಧ ಭಾಗಗಳಿಂದ ಸಿಟಿ ಸೆಂಟರ್ ಕಡೆಗೆ ಆಗಮಿಸಿದ್ದ ಸ್ಪರ್ಧಿಗಳು, ಸೂರ್ಯೋದಯಕ್ಕೂ ಮುನ್ನವೇ ಉತ್ಸಾಹದಿಂದ ಓಟಕ್ಕೆ ಸಜ್ಜಾಗಿದ್ದರು.

ಮಹಿಳೆಯರು ಕೇವಲ ಪೀಳಿಗೆಯನ್ನು ಪೋಷಿಸುವುದಲ್ಲದೆ, ತಮ್ಮ ವೈಯಕ್ತಿಕ ಬೆಳವಣಿಗೆ ಮತ್ತು ಬದಲಾವಣೆಯನ್ನು ಸಂಭ್ರಮಿಸುವುದೇ ಈ ಸೀರೆ ಓಟದ ಮುಖ್ಯ ಉದ್ದೇಶವಾಗಿತ್ತು. ಇದು ಮಹಿಳೆಯರಿಗಾಗಿಯೇ ವಿಶೇಷವಾಗಿ ಆಯೋಜಿಸಲಾದ ಓಟವಾಗಿದೆ. ತಾಯಿ-ಮಗಳು, ಅತ್ತೆ-ಸೊಸೆ, ಒಂದಿಡೀ ಕುಟುಂಬದ ಸದಸ್ಯರು, ಸ್ನೇಹಿತರ ಗುಂಪುಗಳು ಹೀಗೆ ವಿವಿಧ ಸ್ತರದ ಮಹಿಳೆಯರು ಒಟ್ಟಾಗಿ ಓಟದಲ್ಲಿ ಭಾಗವಹಿಸಿ ಸಂಭ್ರಮಿಸಿದರು.

Edited By :
PublicNext

PublicNext

08/03/2026 11:27 am

Cinque Terre

20.18 K

Cinque Terre

0

ಸಂಬಂಧಿತ ಸುದ್ದಿ