ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸಪೇಟೆ : 25 ಕ್ರಸ್ಟ್‌ ಗೇಟ್ ತೆರವು ಕಾರ್ಯ ಪೂರ್ಣ : ಮಳೆಗಾಲಕ್ಕೂ ಮುನ್ನ ಗೇಟ್‌ಗಳ ಭರವಸೆ ಈಡೇರಿಕೆ!

ಹೊಸಪೇಟೆ : ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಹೊರವಲಯದಲ್ಲಿರು ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಅಳವಡಿಕೆ ಕಾರ್ಯ ಭರದಿಂದ ಸಾಗಿದೆ. ಹೊಸ ಕ್ರಸ್ಟ್ ಗೇಟ್ ಕೂಡಿಸೋ ಕೆಲಸ ಕಳೆದ ಎರಡು ತಿಂಗಳಿಂದ ಆರಂಭ ಆಗಿದ್ದು, 10ಕ್ಕೂ ಹೆಚ್ಚು ಗೇಟ್ ಗಳ ಅಳವಡಿಕೆ ಸಂಪೂರ್ಣ ಆಗಿದೆ. ಟ್ರೈಯಲ್ ರನ್ ಮಾಡಿ, ಏರಿಸಿ, ಇಳಿಸೋ ಕಾರ್ಯ ಬಾಕಿ ಇದೆ. ಗೇಟ್ ನಂಬರ್ 18ರದ್ದು ಮೇಲಕ್ಕೆ ಎತ್ತುವ ಮತ್ತು ಕೆಳಕ್ಕೆ ಇಳಿಸುವ ಕಾರ್ಯ ಮಾತ್ರ ಅಳವಡಿಕೆ ಯಶಸ್ವಿ ಆಗಿದೆ. ಅದೇ ರೀತಿ 25 ಹಳೆಯ ಕ್ರಸ್ಟ್ ಗೇಟ್ ಗಳ ತೆರವು ಕಾರ್ಯ ಸಂಪೂರ್ಣ ಆಗಿದೆ. ಸದ್ಯ ಇನ್ನೂ 2 ಕ್ರಸ್ಟ್ ಗೇಟ್ ಗಳ ತೆರವು ಜೋರಾಗಿದೆ. 25 ಹೊಸ ಕ್ರಸ್ಟ್ ಗೇಟ್ ಗಳ ನಿರ್ಮಾಣವೂ ಪೂರ್ಣ ಆಗಿದೆ ಎನ್ನಲಾಗಿದೆ.

ಸದ್ಯ ಎರಡು ಗೇಟ್ ಗಳು ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಹೊಸಪೇಟೆ, ಗದಗ್ ನಲ್ಲಿ ತಲಾ ಒಂದೊಂದು ಗೇಟ್ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. 3 ಹೊಸ ಗೇಟ್ ಗಳ ಎಲೆಕ್ಟ್ರಿಕ್ ಕೆಲಸವೂ ಕೂಡಾ ಪೂರ್ಣಗೊಂಡಿದೆ. ಕಳೆದೊಂದು ತಿಂಗಳ ಹಿಂದೆ ಒಂದು ಗೇಟ್ ಕೂಡಿಸಲು ತಂತ್ರಜ್ಞರು 20 ದಿನ ಅವಧಿ ತೆಗೆದುಕೊಂಡಿದ್ರು. ಆದ್ರೀಗ ಒಂದು ತಿಂಗಳಲ್ಲಿ 10 ಕೂಡಿಸುವ ಕಾರ್ಯ ಪೂರ್ಣಗೊಂಡಿದ್ದನ್ನ ನೋಡ್ತಿದ್ರೆ ಮಳೆಗಾಲ ಆರಂಭಕ್ಕೂ ಮುನ್ನವೇ ಟಿಬಿ ಬೋರ್ಡ್ ಜನರಿಗೆ, ರೈತರಿಗೆ ಕೊಟ್ಟ ಭರವಸೆಯನ್ನ ಉಳಿಸಿಕೊಳ್ಳುವ ಭರವಸೆ ಮತ್ತಷ್ಟು ಇಮ್ಮಡಿ ಆದಂತೆ ಆಗಿದೆ.

Edited By : Vinayak Patil
PublicNext

PublicNext

08/03/2026 03:08 pm

Cinque Terre

16.83 K

Cinque Terre

0

ಸಂಬಂಧಿತ ಸುದ್ದಿ