ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಳ್ಳು ತುಳಿದರೂ ನೋವಿಲ್ಲ : ನಂಬಿಕೆಯ ಪರಾಕಾಷ್ಠೆ ತೋರಿದ ಪವಾಡ

ಹಗರಿಬೊಮ್ಮನಹಳ್ಳಿ : ಯುಗಾದಿ ಹಬ್ಬದ ಪ್ರಯುಕ್ತ ದೇವರ ಬೇಟೆ ಗಿಡ ಪವಾಡ ಭಕ್ತರ ಭಕ್ತಿಯ ಪರಾಕಾಷ್ಠೆ ಮೈನವಿರೇಳಿಸುತ್ತಿದೆ. ಈ ಪವಾಡ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಕಿತ್ನೂರು ಗ್ರಾಮದಲ್ಲಿ ಆಂಜನೇಯ ದೇವರ ಜಾತ್ರೆ ಪ್ರಯುಕ್ತ ಪ್ರತಿವರ್ಷ ನಡೆಯುತ್ತದೆ. ಮುಳ್ಳಿನ ರಾಶಿಯ ಮೇಲೆ ಹಾರೋದು, ಕುಣಿಯುವುದು ಮಾಡುತ್ತಾರೆ. ಮುಳ್ಳಿನ ರಾಶಿಯ ಮೇಲೆ ಯುವಕರನ್ನು ಎತ್ತಿ ಹಾಕುತ್ತಾರೆ. ಆದರೆ ಯಾರೊಬ್ಬರಿಗೂ ಯಾವುದೇ ಗಾಯ ಆಗಿಲ್ಲ.

ಭಕ್ತಾದಿಗಳು ಬೆಳಗ್ಗೆಯಿಂದ ಉಪವಾಸ ಇದ್ದು ಮುಳ್ಳು ಗಿಡಗಳನ್ನು ತುಳಿಯುತ್ತಾರೆ. ಇನ್ನು ಹಗರಿಬೊಮ್ಮನಹಳ್ಳಿ ತಾಲೂಕಿನ ವಲ್ಲಭಾಪುರ ಗ್ರಾಮದಲ್ಲಿಯೂ ಆಂಜನೇಯ ಸ್ವಾಮಿಯ ಮುಳ್ಳು ಪವಾಡ ಜೋರಾಗಿ ನಡೆಯುತ್ತದೆ. ಜಗತ್ತಲ್ಲಿ ಆಧುನಿಕತೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಪ್ರಚಾರದಲ್ಲಿದ್ದರೂ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದ ಆಚರಣೆಗಳನ್ನು ಮುಂದುವರೆಸಿಕೊಂಡು ಬರುತ್ತಿರುವುದು ನಿಜಕ್ಕೂ ವಿಶೇಷ.

Edited By :
PublicNext

PublicNext

21/03/2026 08:54 pm

Cinque Terre

7.03 K

Cinque Terre

0

ಸಂಬಂಧಿತ ಸುದ್ದಿ