ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸಪೇಟೆ : ಮಹಿಳೆಯರು ಎಲ್ಲಾ ರಂಗದಲ್ಲಿದ್ದಾರೆ, ಆದರೆ ಸಾಧನೆ ಸುಲಭವಲ್ಲ: ನ್ಯಾಯಾಧೀಶೆ ಚೈತ್ರಾ

ಹೊಸಪೇಟೆ : ವಿಜಯನಗರ ಜಿಲ್ಲಾ ಪೊಲೀಸ್ ವತಿಯಿಂದ ಮಹಿಳಾ ದಿನಾಚರಣೆ ಆಚರಣೆ ಆಚರಿಸಲಾಯಿತು. ವಿಜಯನಗರ ಜಿಲ್ಲೆಯ ಹೊಸಪೇಟೆಯ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಮಹಿಳಾ ದಿನಾಚರಣೆ ಆಚರಿಸಲಾಗಿದ್ದು, ಹೊಸಪೇಟೆಯ ನ್ಯಾಯಾಧೀಶರು, ಪೊಲೀಸ್ ವರಿಷ್ಠಾಧಿಕಾರಿ, ಮಹಿಳಾ ಪೊಲೀಸ್ ಅಧಿಕಾರಿಗಳು ಸಿಬ್ಬಂದಿಗಳು ಭಾಗಿ ಆಗಿದ್ರು.

ಮಹಿಳಾ ದಿನಾಚರಣೆ ಬಳಿಕ ಮಾತಾಡಿದ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಚೈತ್ರಾ, ಮಹಿಳೆ ಇವತ್ತು ಕೇವಲ ಅಡುಗೆ ಮನೆಗೆ ಸೀಮಿತ ಅನ್ನೋದು ಮಾಯವಾಗಿದೆ. ಇವತ್ತು ಮಹಿಳೆ ಬಾಹ್ಯಾಕಾಶದಲ್ಲೂ ಕೂಡ ಹಾರಾಡಿದ್ದಾರೆ. ಸುದೃಢ ಸಮಾಜ ನಿರ್ಮಾಣಕ್ಕೆ ಕೇವಲ ಮಹಿಳೆ ಅಥವಾ ಪುರುಷರಿಂದ ಅಲ್ಲ. ಮಹಿಳೆ, ಪುರುಷ ಇಬ್ಬರು ಕೂಡ ಜತೆಯಾದ್ರೆ ಸುದೃಢ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಇವತ್ತು ಮಹಿಳೆ ಕೇವಲ ಮನೆಗೆ ಸೀಮಿತವಾಗಿ ಅಲ್ಲದೇ, ಕಚೇರಿಗಳಲ್ಲಿಯೂ ಹೆಚ್ಚಿದ್ದಾರೆ.

ಪೊಲೀಸ್ ಇಲಾಖೆ, ನ್ಯಾಯಾಂಗ ಇಲಾಖೆಯಲ್ಲಿ ಹೆಚ್ಚೆಚ್ಚು ಮಹಿಳೆಯರೇ ಇದ್ದಾರೆ. ಇಲ್ಲಿವರೆಗೆ ಬರಬೇಕು ಅಂದ್ರೆ ಅಷ್ಟು ಸುಲಭದ ಕೆಲಸವಲ್ಲ ಹೆಚ್ಚುವರಿ ನ್ಯಾಯಾಧೀಶೆ ಚೈತ್ರಾ ಹೇಳಿದ್ರು.

Edited By :
PublicNext

PublicNext

08/03/2026 04:31 pm

Cinque Terre

12.28 K

Cinque Terre

0