ಹೊಸಪೇಟೆ : ಬೇಸಿಗೆ ಆರಂಭ ಆಗ್ತಿದ್ದಂತೆ ವಿಜಯನಗರ ಜಿಲ್ಲೆಯಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಹೊಸಪೇಟೆ ತಾಲೂಕಿನ ಧರ್ಮಸಾಗರ ಗ್ರಾಮದಲ್ಲಿ ಗ್ರಾಮಸ್ಥರಿಂದ ನೀರಿಗಾಗಿ ಪರದಾಟ ಶುರುವಾಗಿದೆ. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು PDO ಆಡಳಿತಾಧಿಕಾರಿ ಗ್ರಾಮಗಳಿಗೆ ಬರುತ್ತಿಲ್ಲ ಅಂತ ಆಕ್ರೋಶ ಹೊರಹಾಕಿದರು.
ಸರ್ಕಾರದ ಆದೇಶದಂತೆ PDO ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ವಾಸವಿರಬೇಕು ಎಂಬ ಆದೇಶವಿದೆ. ಗ್ರಾಮದಲ್ಲಿ ವಾಟರ್ ಮ್ಯಾನ್ ಹುದ್ದೆ ಖಾಲಿಯಾಗಿ ಎರಡು ವರ್ಷವಾದರೂ ನೇಮಕಾತಿಯಾಗಿಲ್ಲ. ನಿವೃತ್ತಿಯಾದ ನೀರುಗಂಟಿಗೂ ಸಂಬಳ ಕೊಡದೆ ಇಲಾಖೆ ಸತಾಯಿಸುತ್ತಿದೆ ಎನ್ನಲಾಗುತ್ತಿದೆ. ವೇತನ ಕೊಡದ ವಾಟರ್ ಮ್ಯಾನ್ ಕಾರಣ ಕೆಲಸಕ್ಕೆ ಬರುತ್ತಿಲ್ಲವಂತೆ. ಅಧಿಕಾರಿ ಸಿಬ್ಬಂದಿ ಕಿತ್ತಾಟಕ್ಕೆ ಗ್ರಾಮಸ್ಥರು ನೀರಿಲ್ಲದೇ ಪರದಾಡುತ್ತಿದ್ದಾರೆ. ಈಗಾಗಲೇ ಜಿಲ್ಲಾಧಿಕಾರಿಗಳು ಸರ್ಕಾರದ ಆದೇಶದಂತೆ ಸಭೆ ನಡೆಸಿದ್ದಾರೆ. ಆದರೆ ಯಾವೊಂದು ನಿರ್ಧಾರ ಕಾರ್ಯರೂಪಕ್ಕೆ ಬಂದಿಲ್ಲವಂತೆ. ಅಷ್ಟೇ ಅಲ್ಲದೇ ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರು ಕೊರತೆಯಾಗದಂತೆ ಅಧಿಕಾರಿಗಳ ಟಾಸ್ಕ್ ಪೋರ್ಸ್ ಕೂಡ ರಚನೆಯಾಗಿದೆ. ಇಷ್ಟೆಲ್ಲ ವ್ಯವಸ್ಥೆ ಮಾಡಿದ್ದರೂ ಜಿ.ಪಂ ಸಿಇಓ ತಾ.ಪಂ ಅಧಿಕಾರಿಗಳು ಗ್ರಾಮಗಳತ್ತ ಬರುತ್ತಿಲ್ಲ ಅಂತ ಗ್ರಾಮಸ್ಥರು ಆರೋಪ ಮಾಡುತ್ತಿದ್ದು, ಈ ಕೂಡಲೇ ನಮಗೆ ನೀರು ಕೊಡಿ ಇಲ್ಲವಾದಲ್ಲಿ ರಸ್ತೆ ಬಂದ್ ಮಾಡುತ್ತೇವೆ ಅಂತ ಗ್ರಾಮಸ್ಥರು ಆಕ್ರೋಶ ಹೊರಹಾಕಿದರು.
ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಗ್ರಾಮಸ್ಥರ ನೀರಿನ ಭವನೆ ಈಡೇರಿಸಬೇಕು ಅಂತ ಮನವಿ ಮಾಡಿದ್ದಾರೆ.
PublicNext
21/03/2026 02:17 pm
LOADING...