ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ; ರೋಗಿಗಳ ರಕ್ಷಣೆಗೆ ಇರೋ ಆ್ಯಂಬುಲೆನ್ಸ್ ನಲ್ಲಿ ಸಾರ್ವಜನಿಕರ ಓಡಾಟ

ಗದಗ: ರೋಗಿಗಳಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗಲಿ ಎಂದು ಸರಕಾರವು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಆ್ಯಂಬುಲೆನ್ಸ್ ಗಳ ವ್ಯವಸ್ಥೆಯನ್ನು ಮಾಡಿರುತ್ತದೆ. ಆದರೆ ಅದರ ಸಿಬ್ಬಂದಿ ಮಾತ್ರ ಆ್ಯಂಬುಲೆನ್ಸ್ ನಲ್ಲಿ ಸಾರ್ವಜನಿಕರನ್ನು ಕರೆದುಕೊಂಡು ಹೋಗುತ್ತಿದ್ದಾರೆ.

ಹೌದು ಗದಗ ನಗರದ ಜಿಮ್ಸ್ ಆಸ್ಪತ್ರೆಗೆ ಸೇರಿದ ಆ್ಯಂಬುಲೆನ್ಸ್ ನ ಚಾಲಕ ಸಾರ್ವಜನಿಕರನ್ನು ಕರೆದುಕೊಂಡು ಹೋಗುತ್ತಿರುವುದಕ್ಕೆ ಆಕ್ರೋಶವನ್ನು ವ್ಯಕ್ತವಾಗಿದೆ. ಈ ರೀತಿ ಆ್ಯಂಬುಲೆನ್ಸ್ ನಲ್ಲಿ ಸಾರ್ವಜನಿಕರನ್ನು ಕರೆದುಕೊಂಡು ಹೋಗುವುದರಿಂದ ರೋಗಿಗಳಿಗೆ ಇನ್ಫೆಕ್ಷನ್ ಆಗುವ ಸಾಧ್ಯತೆ ಇದೆ. ಅಲ್ಲದೇ ಆ್ಯಂಬುಲೆನ್ಸ್ ಅನ್ನು ದುರುಪಯೋಗ ಮಾಡಿಕೊಂಡ ಚಾಲಕನ ಮೇಲೆ ಶಿಸ್ತು ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಎಚ್ಚರಿಕೆ ನೀಡಿದರು.

Edited By :
PublicNext

PublicNext

09/03/2026 02:28 pm

Cinque Terre

31.78 K

Cinque Terre

0