ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ : ಪ್ರೀತಿಸಿದ ಹುಡುಗಿಗಾಗಿ ತಮ್ಮನ ಕೊಂದ ಅಣ್ಣ

ಗದಗ : ಒಂದು ಹೆಣ್ಣಿಗಾಗಿ ಒಡಹುಟ್ಟಿದ ತಮ್ಮನನ್ನೇ ಅಣ್ಣನೊಬ್ಬ ಕೊಲೆಮಾಡಿದ ಘಟನೆ ಮಂಗಳವಾರ ಬೆಳಗಿನ ಜಾವದಲ್ಲಿ ಗದಗ ಜಿಲ್ಲೆ ನರಗುಂದ ತಾಲೂಕಿನ ಹಿರೇಕೊಪ್ಪ ಗ್ರಾಮದ ಹೊರವಲಯದ ಜಮೀನಿನಲ್ಲಿ ನಡೆದಿದೆ.

ಹೌದು... ಫಕ್ಕೀರಪ್ಪ ಎಂಬ ಯುವಕನೇ ಕೊಲೆಗೀಡಾದ ದುರ್ದೈವಿಯಾಗಿದ್ದಾನೆ, ಅಶೋಕ ಕೊಲೆ ಮಾಡಿದ ಪಾಪಿ ಅಣ್ಣ. ಮನೆಯಲ್ಲಿ ಪೋಷಕರು ಈ ಇಬ್ಬರು ಅಣ್ಣ ತಮ್ಮಂದಿರ ಮದುವೆ ಮಾಡಬೇಕು ಎಂದುಕೊಂಡಿರುತ್ತಾರೆ. ಅದರಂತೆ ಅಣ್ಣ-ತಮ್ಮ ಇಬ್ಬರು ಹುಡುಗಿ ನೋಡಿ ಬಂದಿರುತ್ತಾರೆ.

ಆದರೆ ಅಣ್ಣನಿಗೆ ತಮ್ಮ ನೋಡಿದ ಹುಡುಗಿ ಮೇಲೆ ಕಣ್ಣು ಬಿದ್ದಿದೆ. ಹೀಗಾಗಿ ಆ ಹುಡುಗಿಯನ್ನು ಮದುವೆ ಆಗಲು ತಮ್ಮನೇ ಅಡ್ಡಿ ಎಂದು ತಿಳಿದು, ಪಾಪಿ ಅಶೋಕ ತನ್ನ ತಮ್ಮನನ್ನೇ ಕೊಲೆಮಾಡಿದ್ದಾನೆ. ಪೊಲೀಸರಿಗೆ ಕರೆ ಮಾಡಿ ಯಾರೋ ಕಿಡಿಗೇಡಿಗಳು ನನ್ನ ತಮ್ಮನನ್ನು ಹೊಡೆದು ಸಾಯಿಸಿದ್ದಾರೆ ಎಂದು ಸುಳ್ಳು ಕಥೆ ಕಟ್ಟಿದ್ದಾನೆ.

ಆರೋಪಿಯ ಹೇಳಿಕೆಯಿಂದ ಅನುಮಾನಗೊಂಡ ಪೊಲೀಸರು ಡಾಗ್ ಸ್ಕ್ವಾಡ್ ಜೊತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ವೇಳೆ ನಾಯಿ ನೇರವಾಗಿ ಅಶೋಕನ ಬಳಿ ಬಂದು ನಿಲ್ಲುತ್ತದೆ. ಕೂಡಲೇ ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಾಗ ಹುಡುಗಿಯ ವಿಚಾರವಾಗಿ ಕೊಲೆ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Edited By :
PublicNext

PublicNext

18/03/2026 11:24 am

Cinque Terre

14.91 K

Cinque Terre

0

ಸಂಬಂಧಿತ ಸುದ್ದಿ