ಕೋಲಾರ - ಕೋಲಾರ ಜಿಲ್ಲೆಯ ಮಾಲೂರು ನಗರದಲ್ಲಿ ಪ್ಲೈ ಓವರ್ ಜಟಾಪಟಿ ಶುರುವಾಗಿದೆ, ಮಾಲೂರು ನಗರದಲ್ಲಿ ಟ್ರಾಪಿಕ್ ಸಮಸ್ಯೆ ಬಗೆಹರಿಸಲು, ಮುಖ್ಯ ರಸ್ತೆಯಲ್ಲಿ 3 ಕಿ.ಮೀ ಮಾರ್ಗದಲ್ಲಿ ಸುಮಾರು 700 ಕೋಟಿ ವೆಚ್ಚದಲ್ಲಿ, ದ್ವಿಪಥ ಮಾರ್ಗದ ಪ್ಲೈ ಓವರ್ ನಿರ್ಮಾಣಕ್ಕೆ ಶಾಸಕ ಕೆವೈ ನಂಜೇಗೌಡ ಮುಂದಾಗಿದ್ದಾರೆ, ಆದರೆ ಪ್ಲೈ ಓವರ್ ಕಾಮಗಾರಿಗೆ ಆರಂಭದಲ್ಲೇ ಭಾರೀ ವಿರೋಧ ವ್ಯಕ್ತಿವಾಗಿದೆ, ಮಾಲೂರಿನ ಎ.ಪಿ.ಎಂ.ಸಿ ಯಿಂದ ಪ್ಲೈ ಓವರ್ ಕಾಮಗಾರಿ ಆರಂಭವಾಗಿ, ಜೂನಿಯರ್ ಕಾಲೇಜು ವರೆಗೂ, ಪ್ಲೈ ಓವರ್ ನಿರ್ಮಾಣವಾದರೂ, ಮರಳಿ ನಗರದಲ್ಲೇ ಪ್ಲೈ ಓವರ್ ಮುಕ್ತಾಯವಾಗಲಿದೆ.
ರೈಲ್ವೆ ಮೇಲ್ಸೇತುವೆ ರಸ್ತೆ ಕಿರಿದಾಗಿರೋ ಕಾರಣ, ಟ್ರಾಪಿಕ್ ಸಮಸ್ಯೆ ಬಗೆಹರಿಯಲ್ಲ, ಇದೊಂದು ಅವೈಜ್ಞಾನಿಕ ಕಾಮಗಾರಿ ಎಂದು ಮಳಿಗೆ ಮಾಲೀಕರು ಪ್ಲೈ ಓವರ್ ನಿರ್ಮಾಣಕ್ಕೆ ವಿರೋಧಿಸಿದ್ದಾರೆ.
PublicNext
11/03/2026 10:34 am
LOADING...