ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ: ಐದೇ ದಿನಕ್ಕೆ ಕಿತ್ತು ಬಂದ ಟಾರ್

ಕೋಲಾರ - ಕೋಲಾರದಲ್ಲಿ ಕಳಪೆ ಕಾಮಗಾರಿ ಕಣ್ಣಿಗೆ ರಾಚುತ್ತಿದೆ. ತಾಲೂಕಿನ ವೇಮಗಲ್ ಹೋಬಳಿಯ ಪುರಹಳ್ಳಿ ಗ್ರಾಮದಿಂದ ತೋಕಲಘಟ್ಟ ಗ್ರಾಮದ ಮಧ್ಯೆ, ಮಾರ್ಚ್ 10 ಹಾಕಿದ್ದ ಡಾಂಬರು ರಸ್ತೆ, ಕೇವಲ ಐದೇ ದಿನಕ್ಕೆ ಕಿತ್ತು ಬಂದಿದೆ.

ಸುಮಾರು 75 ಲಕ್ಷ ವೆಚ್ಚದಲ್ಲಿ ಒಂದು ಲೇಯರ್ ಡಾಂಬರೀಕರಣವನ್ನು ಗುತ್ತಿಗೆದಾರ ಮಾಡಿದ್ದಾರೆ. ಆದರೆ ಡಾಂಬರು ಕಳಪೆ ಎಂಬ ಆರೋಪ ಕೇಳಿಬಂದಿದ್ದು, ಡಾಂಬರು ಮೇಲಕ್ಕೆ ಎದ್ದು ಬರ್ತಿದ್ದು, ಕಾಮಗಾರಿ ಕಳಪೆಯಾಗಿದ್ದು, ಈ ಬಗ್ಗೆ ಶಾಸಕ ಕೊತ್ತೂರು ಮಂಜುನಾಥ್ ಗಮನ ಹರಿಸಲಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಇಷ್ಟು ಬೇಗ ಟಾರ್ ಕಿತ್ತು ಬರುತ್ತಿದೆ ಅಂದ್ರೆ ಇನ್ನೆಂತಹ ಕಳಪೆ ಕಾಮಗಾರಿ ಅಂತ ಜನಾಕ್ರೋಶ ವ್ಯಕ್ತವಾಗಿದೆ.

Edited By : Vinayak Patil
PublicNext

PublicNext

19/03/2026 02:21 pm

Cinque Terre

12.41 K

Cinque Terre

0