ಕೋಲಾರ: ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಪ್ರಸಿದ್ಧ ಪುಣ್ಯಕ್ಷೇತ್ರ ಚಿಕ್ಕ ತಿರುಪತಿ ದೇವಸ್ಥಾನದ ರಾಜಗೋಪುರ ಪಕ್ಕದಲ್ಲಿ, ಅನಧಿಕೃತವಾಗಿ ಕಟ್ಟಲಾಗಿದ್ದ, ಆರು ಮಳಿಗೆಗಳನ್ನು ತೆರವು ಮಾಡಲಾಗಿದೆ.
ದೇವಸ್ಥಾನದ ಮುಂಭಾಗದ ರಸ್ತೆ ಮತ್ತು ಪಾದಚಾರಿ ಮಾರ್ಗ ಆಕ್ರಮಿಸಿ ನಿರ್ಮಿಸಿದ್ದ ಮಳಿಗೆಗಳನ್ನು ತೆರವುಗೊಳಿಸುವಂತೆ, ಕಳೆದ ಹತ್ತಾರು ವರ್ಷದಿಂದ ಭಕ್ತರು ಮತ್ತು ಸ್ಥಳೀಯರ ಬೇಡಿಕೆಯಾಗಿತ್ತು, ಈ ಹಿನ್ನೆಲೆ ಚಿಕ್ಕ ತಿರುಪತಿ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಆರು ಮಳಿಗೆಗಳನ್ನು ತೆರವು ಮಾಡಲು ಮುಂದಾದಾಗ, ಮಳಿಗೆ ಮಾಲೀಕರು 12 ಗಂಟೆಗಳ ಕಾಲ ಸಮಯಾವಕಾಶ ಪಡೆದು, ಖುದ್ದು ಮಳಿಗೆಗಳನ್ನು ತೆರವುಗೊಳಿಸಿ ಸಹಕಾರ ನೀಡಿದರು, ಇನ್ನು ಯಾವುದೇ ಅಹಿತಕರ ಘಟನೆ ನಡೆಯದಂತೆ ಮಾಲೂರು ಪೊಲೀಸರು ಬಿಗಿ ಭದ್ರತೆ ನೀಡಿದರು.
PublicNext
11/03/2026 10:37 pm
LOADING...