ಕೋಲಾರ : ಕೋಲಾರ ಜಿಲ್ಲೆಯ ಕೆ.ಜಿ.ಎಫ್. ತಾಲೂಕಿನ ಮಾರಿಕುಪ್ಪಂ ರೈಲ್ವೆ ನಿಲ್ದಾಣದಿಂದ, ಆಂಧ್ರದ ಕುಪ್ಪಂ ತಾಲೂಕುವರೆಗೂ, ರೈಲ್ವೆ ಲೈನ್ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದೆ. ಕೆಜಿಎಫ್ ನ ಮಾರಿಕೊಪ್ಪಂನಿಂದ ಆಂಧ್ರ ಗಡಿವರೆಗೂ, ಸುಮಾರು 5.8 ಕಿಲೋ ಮೀಟರ್ ಮಾರ್ಗದಲ್ಲಿ, ಡಬಲ್ ಟ್ರ್ಯಾಕ್ ನಿರ್ಮಾಣ ಕಾಮಗಾರಿ ಕಳೆದ ಎರಡು ವರ್ಷದಿಂದ ನಡೆಯುತ್ತಿದೆ.
ಈಗಾಗಲೇ 3.2 ಕಿಲೋ ಮೀಟರ್ ಉದ್ದಕ್ಕೆ ಟ್ರ್ಯಾಕ್ ನಿರ್ಮಾಣ ಮಾಡಲಾಗಿದೆ. ಇನ್ನು ಬಾಕಿ ಉಳಿದಿರುವ ಕಾಮಗಾರಿಗಾಗಿ ರೈಲ್ವೆ ಹಳ್ಳಿಗಳನ್ನ ಹೊತ್ತು ರೈಲು ಪ್ರಯಾಣ ನಡೆಸಿದ್ದು, ಗುಣಮಟ್ಟವನ್ನು ಪರಿಶೀಲನೆ ಮಾಡಲಾಗಿದೆ. ಆದರೆ ಯೋಜನೆಯ ಅಂತಿಮ ನಿಲ್ದಾಣವಾಗಿರುವ ಆಂಧ್ರದ ಕುಪ್ಪಂ ತಾಲೂಕಿನಲ್ಲಿ, ರೈಲ್ವೆ ಮಾರ್ಗ ನಿರ್ಮಾಣಕ್ಕೆ, ಭೂಸ್ವಾದೀನ ಪ್ರಕ್ರಿಯೆ ವಿಳಂಬವಾಗಿರುವ ಕಾರಣ, ಮಾರಿಕುಪ್ಪಂ ಹಾಗೂ ಕುಪ್ಪಂ ಮಾರ್ಗದ ಕಾಮಗಾರಿ ವಿಳಂಬವಾಗಿದೆ ಎಂದು ತಿಳಿದು ಬಂದಿದೆ. ಈ ವರ್ಷಾಂತ್ಯಕ್ಕೆ ಕಾಮಗಾರಿ ಮುಗಿಸುವ ಭರವಸೆಯನ್ನ ರೈಲ್ವೆ ಇಲಾಖೆ ನೀಡಿದೆ.
Kshetra Samachara
21/03/2026 12:00 pm
LOADING...