ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ: ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ರಾಜ್ಯದ ಸಿಎಂ ಆಗಬೇಕು

ಕೋಲಾರ: ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ರಾಜ್ಯದ ಸಿಎಂ ಆಗಬೇಕು ಎಂಬ ಬಯಕೆ, ನನಗೂ ಸೇರಿ ಹಲವು ನಾಯಕರಲ್ಲಿದೆ, ಆದರೆ ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸಿದರು ಎಂಬಂತೆ ಆಗಬಾರದು ಎಂದು, ಕೋಲಾರ ಜಿಲ್ಲೆಯ ಮುಳಬಾಗಿಲು ಜೆಡಿಎಸ್ ಶಾಸಕ ಸಮೃದ್ದಿ ಮಂಜುನಾಥ್ ಹೇಳಿದ್ದಾರೆ.

ರಾಜ್ಯದಲ್ಲಿ ಮುಂದೆ ಎನ್.ಡಿ.ಎ ಮೈತ್ರಿಯಲ್ಲಿ 150 ಸೀಟ್ ಗೆಲ್ಲುವ ಗುರಿಯನ್ನ ನಾವು ಹೊಂದಿದ್ದೇವೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದಿಂದ ಕೆಟ್ಟ ಹೆಸರು ಬಂದಿದೆ, ನಾವು ಅದರಿಂದ ಬಹಳ ಎಚ್ಚೆತ್ತುಕೊಳ್ಳಬೇಕಿದೆ, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 75 ಸೀಟ್ ಹಾಗು ಜೆಡಿಎಸ್ 75 ಸೀಟ್ ಗೆಲ್ಲುವ ಕಡೆ ಗಮನ ಹರಿಸಬೇಕಿದೆ, ಹಾಗಾಗಿ ಮೈತ್ರಿ ಪಕ್ಷಗಳು ಸ್ತಳೀಯ ಸಂಸ್ತೆಯ ಚುನಾವಣೆಯಿಂದ, ವಿಧಾನಸಭೆ ಚುನಾವಣೆ ವರೆಗೂ ಹೊಂದಾಣಿಕೆ ಯಿಂದ ಇರುವುದು ಹೋಗುವುದು ಮುಖ್ಯ ಎಂದಿದ್ದಾರೆ‌, ಇನ್ನು ಒಳಮೀಸಲಾತಿ ಜಾರಿ ಬಗ್ಗೆ ಶಾಸಕ ಸಮೃದ್ದಿ ಮಂಜುನಾಥ್ ಪ್ರತಿಕ್ರಿಯೆ ನೀಡಿದ್ದು, ಅವರವರ ಜಾತಿ ಎಲ್ಲರಿಗೂ ಮುಖ್ಯವಾಗಿದೆ, ಒಳಮೀಸಲಾತಿ ಜಾರಿಯಿಂದ ಮುಂದಿನ ಪೀಳಿಗೆಯ ಮೇಲೆ ಪರಿಣಾಮ ಬೀರಲಿದೆ, ಒಳಮೀಸಲಾತಿ ಜಾರಿಯ ಬಗ್ಗೆ ಹುನ್ನಾರ ನಡೆಯುತ್ತಿದೆ ಎಂದು ಶಾಸಕ ಸಮೃದ್ದಿ ಮಂಜುನಾಥ್ ಹೇಳಿದ್ದಾರೆ.

Edited By :
PublicNext

PublicNext

17/03/2026 07:49 am

Cinque Terre

8.26 K

Cinque Terre

0

ಸಂಬಂಧಿತ ಸುದ್ದಿ