ಕೋಲಾರ - ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಆದಷ್ಟು ಶೀಘ್ರವಾಗಿ, ಹೈಕಮಾಂಡ್ ನಾಯಕರು ಮುಖ್ಯಮಂತ್ರಿ ಸ್ಥಾನ ನೀಡಲಿ ಎಂದು, ಕೋಲಾರ ಜಿಲ್ಲೆಯ ಕಿಸಾನ್ ಕಾಂಗ್ರೆಸ್ ವಿಭಾಗದ ಜಿಲ್ಲಾಧ್ಯಕ್ಷ ಮುರಳಿ ಒತ್ತಾಯಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಮುರಳಿ ಗೌಡ, ಡಿಕೆ ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಆರು ವರ್ಷ ಯಶಸ್ವಿಯಾಗಿ ಪೂರೈಸಿದ್ದು, ರಾಷ್ಟ್ರ ಮಟ್ಟದಲ್ಲಿ ಡಿಕೆ ಶಿವಕುಮಾರ್ ಅವರು ಟ್ರಬಲ್ ಶೂಟರ್ ಎಂಬ ಎಂಬುದು ಈಗಾಗಲೇ ಸಾಬೀತಾಗಿದೆ, ಮುಂದೆ ರಾಜ್ಯದಲ್ಲಿ ಬಲಿಷ್ಠವಾಗಿ ಪಕ್ಷ ಕಟ್ಟಬೇಕಿರುವ ನಿಟ್ಟಿನಲ್ಲಿ, ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು, ಸಿಎಂ ಆಗಿ ಘೋಷಿಸಬೇಕಿದೆ, ನಮ್ಮ ರಕ್ತದಲ್ಲೇ ಕಾಂಗ್ರೆಸ್ ಇದೆಯೆಂದು ಡಿಕೆ ಶಿವಕುಮಾರ್ ಎಲ್ಲಾ ಕಾಂಗ್ರೆಸ್ ನಾಯಕರಿಗೂ ಪಕ್ಷನಿಷ್ಠೆ ಕಲಿಸಿದ್ದಾರೆ, ಹಾಗಾಗಿ ಡಿಕೆ ಶಿವಕುಮಾರ್ ರನ್ನ ಹೈಕಮಾಂಡ್ ನಾಯಕರು ಸಿಎಂ ಮಾಡಲಿ ಎಂದು ಒತ್ತಾಯಿಸಿದ್ದಾರೆ.
PublicNext
11/03/2026 08:23 am
LOADING...