ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ: ಮೈತ್ರಿ ವಿರುದ್ಧ ಮಾಲೂರಿನಲ್ಲಿ ಅಪಸ್ವರ!

ಕೋಲಾರ: ಜಿಲ್ಲೆಯ ಮಾಲೂರಿನ, ಸ್ವಾಭಿಮಾನಿ ಜನತಾ ಪಕ್ಷದ ನಾಯಕ ಹೂಡಿ ವಿಜಯಕುಮಾರ್, ಜೆಡಿಎಸ್ ಪಕ್ಷ ಸೇರ್ಪಡೆ ಹಿನ್ನೆಲೆ, ಮಾಲೂರು ಬಿಜೆಪಿ ಮುಖಂಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಾಲೂರಿನಲ್ಲಿ ಜೆಡಿಎಸ್ ಬಿಜೆಪಿ ಮಧ್ಯೆ ಮೈತ್ರಿ ಬೇಡವೇ ಬೇಡ, ಅವಶ್ಯಕತೆಯೂ ಇಲ್ಲ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಟಿ.ಬಿ ಕೃಷ್ಣಪ್ಪ ವಾಗ್ದಾಳಿ ನಡೆಸಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಂಜುನಾಥಗೌಡ ಸೋಲಿಸಲು, ಹೂಡಿ ವಿಜಯಕುಮಾರ್ ಪಕ್ಷೇತರವಾಗಿ ಸ್ಪರ್ಧಿಸಿದ್ದರು, ಇದೀಗ ಜೆಡಿಎಸ್ ಸೇರ್ಪಡೆಯಾಗಿದ್ದಾರೆ, ಆದರೆ ಮಾಲೂರು ತಾಲೂಕಿನಲ್ಲಿ ಮೈತ್ರಿ ಪಕ್ಷಗಳ ಅಭ್ಯರ್ಥಿಯಾಗಿ ಮಂಜುನಾಥಗೌಡ ಗೆ, ಟಿಕೆಟ್ ಸಿಕ್ಕರೂ, ಹೂಡಿ ವಿಜಯ್, ಬಿಜೆಪಿ ಪರವಾಗಿ ಕೆಲಸ ಮಾಡುವುದಿಲ್ಲ ಹಾಗಾಗಿ ಮಾಲೂರಿನಲ್ಲಿ ಮೈತ್ರಿಯೇ ಬೇಕಾಗಿಲ್ಲ, ಜಿಲ್ಲಾಧ್ಯಕ್ಷರು ಹಾಗೂ ರಾಜ್ಯ ಮುಖಂಡರ ನಿಯೋಗದೊಂದಿಗೆ ರಾಷ್ಟ್ರ ನಾಯಕರಿಗೂ ಮಾಹಿತಿ ನೀಡಿ, ಮೈತ್ರಿ ಬೇಡವೆಂದು ಒತ್ತಾಯ ಮಾಡುತ್ತೇವೆ, ಜೊತೆಗೆ ಮುಂದಿನ ಚುನಾವಣೆಯಲ್ಲಿ ಮಂಜುನಾಥ್ ಗೌಡ ಅವರು ಮಾಲೂರಿನ ಶಾಸಕರು ಆಗಲಿದ್ದಾರೆ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಟಿಬಿ ಕೃಷ್ಣಪ್ಪ ಹೇಳಿದ್ದಾರೆ.

Edited By : Somashekar
PublicNext

PublicNext

07/03/2026 10:03 am

Cinque Terre

12.49 K

Cinque Terre

0

ಸಂಬಂಧಿತ ಸುದ್ದಿ