ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ: ಜೆಡಿಎಸ್ ವಿರುದ್ಧ ಬಿಜೆಪಿ ವಾಗ್ದಾಳಿ!

ಕೋಲಾರ: ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನಲ್ಲಿ ಜೆಡಿಎಸ್ ಪಕ್ಷದ ವರಿಷ್ಠರ ವಿರುದ್ಧ, ಬಿಜೆಪಿ ನಾಯಕರ ವಾಗ್ದಾಳಿ ಮುಂದುವರೆದಿದೆ. ಸ್ವಾಭಿಮಾನಿ ಜನತಾ ಪಕ್ಷದ ನಾಯಕ ಹೂಡಿ ವಿಜಯ್ ಕುಮಾರ್ ರನ್ನ, ಇತ್ತೀಚೆಗೆ ಜೆಡಿಎಸ್ ಪಕ್ಷಕ್ಕೆ ಸೇರಿಸಿಕೊಂಡಿದ್ದಕ್ಕೆ, ಬಿಜೆಪಿ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ, ಅಲ್ಲದೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ, ಮಾಲೂರಿನಿಂದ, ವಿಜಯ್ ಕುಮಾರ್ ಗೆ ಜೆಡಿಎಸ್ ಟಿಕೆಟ್ ಕೊಡ್ತೀವಿ ಎಂದು, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜೆಕೆ ಕೃಷ್ಣಾರೆಡ್ಡಿ ಹೇಳಿಕೆ ನೀಡಿದ್ದರು, ಇದೀಗ ಜೆ‌.ಕೆ ಕೃಷ್ಣಾರೆಡ್ಡಿ ವಿರುದ್ಧ, ಮಾಲೂರು ಬಿಜೆಪಿ ನಾಯಕರು ತೀವ್ರ ವಾಗ್ದಾಳಿ ನಡೆಸಿದ್ದಾರೆ, ಜೆಕೆ ಕೃಷ್ಣಾರೆಡ್ಡಿ ಅವರು ಕಾಂಗ್ರೆಸ್ ಏಜೆಂಟ್ ನಂತೆ ವರ್ತನೆ ಮಾಡುತ್ತಿದ್ದು, ಬಹಿರಂಗವಾಗಿ ಟಿಕೆಟ್ ಘೋಷಣೆ ಮಾಡಿದ್ದಾರೆ,

ಇದೇ ರೀತಿ ಹೇಳಿಕೆ ಮುಂದುವರೆಸಿದಲ್ಲಿ ಮೈತ್ರಿಕೂಟಕ್ಕೆ ಹಿನ್ನಡೆ ಆಗಲಿದೆ, ಮೈತ್ರಿ ಇಲ್ಲದಿದ್ದರೂ ಮಾಲೂರಿನಲ್ಲಿ ಮುಂದೆ ಬಿಜೆಪಿ ಅಭ್ಯರ್ಥಿಯಾಗಿ, ಮಂಜುನಾಥ್ ಗೌಡ ಅವರು ಮಾಲೂರು ಶಾಸಕರು ಆಗಲಿದ್ದಾರೆ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜೆಕೆ ಕೃಷ್ಣಾರೆಡ್ಡಿ ವಿರುದ್ಧ ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದ್ದಾರೆ.

Edited By : Shivu K
PublicNext

PublicNext

08/03/2026 03:04 pm

Cinque Terre

11.68 K

Cinque Terre

0

ಸಂಬಂಧಿತ ಸುದ್ದಿ