ಕೋಲಾರ : ಜಿಲ್ಲೆಯ ಮುಳಬಾಗಿಲು ತಾಲೂಕಿನ ಆಂಧ್ರ ಗಡಿಭಾಗದಲ್ಲಿ ಇತ್ತೀಚೆಗೆ ಹಸು ಸಾಗಣಿಕೆ ಪ್ರಕರಣಗಳು ಹೆಚ್ಚಾಗಿವೆ. ಈ ಅಕ್ರಮ ಸಾಗಣಿಕೆಗೆ ಕಡಿವಾಣ ಹಾಕಲು ನಂಗಲಿ ಪೊಲೀಸ್ ಠಾಣಾ ವ್ಯಾಪ್ತಿಯ ಗಡಿಯಲ್ಲಿ ಪೊಲೀಸ್ ಬಂದೋಬಸ್ತ್ ಹೆಚ್ಚಿಸುವಂತೆ ಸ್ಥಳೀಯ ಬಿಜೆಪಿ ಮುಖಂಡರು ಒತ್ತಾಯಿಸಿದ್ದಾರೆ.
ಭದ್ರತೆ ಹೆಚ್ಚಿಸಲು ಬಿಜೆಪಿ ಮುಖಂಡರ ಮನವಿ
ಬಿಜೆಪಿ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಸತೀಶ್ ಕುಮಾರ್ ಅವರು ಮುಳಬಾಗಿಲು ಡಿ.ವೈ.ಎಸ್.ಪಿ.ಗೆ ಈ ಕುರಿತು ಮನವಿ ಸಲ್ಲಿಸಿದ್ದಾರೆ. ಕಳೆದ ಒಂದು ತಿಂಗಳಲ್ಲಿ ಮುಳಬಾಗಿಲು ಗ್ರಾಮಾಂತರ ಹಾಗೂ ನಂಗಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಲವು ಬಾರಿ ಹಸು ಸಾಗಣಿಕೆ ಪ್ರಕರಣಗಳು ಬೆಳಕಿಗೆ ಬಂದಿವೆ.
ಖಸಾಯಿಖಾನೆಗಳಿಗೆ ಹಸುಗಳನ್ನು ಬೆಂಗಳೂರಿಗೆ ಸಾಗಿಸಲು ಮುಳಬಾಗಿಲು ಮಾರ್ಗವನ್ನು ಬಳಸಿಕೊಳ್ಳಲಾಗುತ್ತಿದೆ. ಈ ಅಕ್ರಮ ಹಸು ಸಾಗಣಿಕೆಯನ್ನು ತಡೆಯಲು ಗಡಿಭಾಗದಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸುವಂತೆ ಸತೀಶ್ ಕುಮಾರ್ ಮನವಿ ಮಾಡಿದ್ದಾರೆ.
PublicNext
14/03/2026 08:36 am
LOADING...