ಕೋಲಾರ : ಬಾರ್ ನಲ್ಲಿ ಕುಡಿಯಲು ಮದ್ಯ ಕೊಡಿಸಿಲ್ಲ ಎಂಬ ಕಾರಣಕ್ಕೆ, ವ್ಯಕ್ತಿಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಿರುವ ಘಟನೆ, ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಟೇಕಲ್ ಗ್ರಾಮದಲ್ಲಿ ನಡೆದಿದೆ, ಯಲುವಗುಳಿ ಗ್ರಾಮದ ಶ್ರೀನಾಥ್ ಎಂಬುವರು, ಬೆಂಗಳೂರಿಗೆ ರೈಲಿನಲ್ಲಿ ತೆರಳಲು ಹೋಗ್ತಿರುವಾಗ, ಅಡ್ಡಗಟ್ಟಿದ ಉದಯ್ ಕುಮಾರ್ ಹಾಗೂ ಕಾಂತರಾಜು ಎಂಬ ಇಬ್ಬರು ಪಾನಮತ್ತರು, ಬಾರ್ ನಲ್ಲಿ ಮದ್ಯ ಕೊಡಿಸುವಂತೆ ಸತಾಯಿಸಿದ್ದಾರೆ, ಆದರೆ ಇದಕ್ಕೆ ನಿರಾಕರಿಸಿದ ಕಾರಣ, ಶ್ರೀನಾಥ್ ಮೇಲೆ ಚಾಕುವಿನಿಂದ ಮುಖದ ಮೇಲೆ ಹಲ್ಲೆ ಮಾಡಿದ್ದು, ತೀವ್ರ ಗಾಯಗಳಿಂದ ಗಾಯಾಳು ಶ್ರೀನಾಥ್ ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ಮದ್ಯಕ್ಕಾಗಿ ಹಲ್ಲೆ ಮಾಡಿದ ಉದಯ್ ಕುಮಾರ್ ಹಾಗೂ ಕಾಂತರಾಜು ಇಬ್ಬರ ಮೇಲೆ, ಮಾಲೂರಿನ ಮಾಸ್ತಿ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದೆ, ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ಹಲ್ಲೆ ಮಾಡಿದ ಆರೋಪಿಗಳಿಗೆ ತಕ್ಕ ಶಿಕ್ಷೆ ಕೊಡಿಸಿ ಎಂದು ಗಾಯಾಳು ಒತ್ತಾಯಿಸಿದ್ದಾರೆ.
PublicNext
05/03/2026 12:34 pm
LOADING...