ಹುಬ್ಬಳ್ಳಿ: ಮಗುವು ಅತ್ತರೆ, ತಾನೇ ತುತ್ತು ಹಾಲನ್ನೆರೆದವಳು ತಾಯಲ್ಲವೇ..? ನಮಗಾಗಿ ಜೀವವ ತೇದಿಲ್ಲವೇ ಎಂಬುವಂತಹ ಹಾಡನ್ನು ಎಲ್ಲರೂ ಕೇಳಿದ್ದೇವೆ. ಹತ್ತು ಜನ್ಮವೆತ್ತಿದರೂ ತಾಯಿ ಋಣ ತೀರಿಸಲು ಸಾಧ್ಯವಿಲ್ಲ ಎಂಬ ಮಾತಿದೆ. ಆದರೆ, ತಾಯಿಯ ಪ್ರೇಮ, ತಾಯಿ ಆಸೆಯನ್ನು ಈಡೇರಿಸಲು ಇಲ್ಲೊಬ್ಬ ಪುತ್ರ ತಾಯಿಯನ್ನು ಬಜಾಜ್ ಚೇತಕ್ ಸ್ಕೂಟರ್‌ನಲ್ಲಿ ದೇಶ ಪರ್ಯಟನೆ ಮಾಡಿಸಿ, ಹೆಮ್ಮೆಯ ಪುತ್ರನಾಗಿದ್ದಾರೆ.
ಮೈಸೂರಿನ ಬೋಗಾದಿ ಬಡಾವಣೆ ನಿವಾಸಿಯಾದ ಡಿ.ಕೃಷ್ಣಕುಮಾರ ಅವರು ತಮ್ಮ ತಾಯಿಯ ಕನಸಿಗೆ ಕಾರ್ಪೊರೇಟ್ ಉದ್ಯೋಗ ತೊರೆದು ದೇಶ-ವಿದೇಶದ ಪುಣ್ಯ ಸ್ಥಳಗಳಿಗೆ ತೆರಳಿ ದೇವರ ದರ್ಶನ ಮಾಡಿಸಿದ್ದಾರೆ. ಹೌದು.. ತಾಯಿಗಾಗಿ ಉದ್ಯೋಗ ತೊರೆದ ಧೀರ ಕೃಷ್ಣಕುಮಾರ ಅವರ ತಂದೆ ದಕ್ಷಿಣಾಮೂರ್ತಿಯವರದ್ದು, ಕೂಡು ಕುಟುಂಬ. ಅಲ್ಲಿ ತಾಯಿಯ ಕೆಲಸ ಮನೆಯ ಗೃಹಣಿ.
ಹೀಗಿದ್ದಾಗ ಬರೀ ಕೆಲಸ ಬಿಟ್ಟರೆ ಬೇರೆಲ್ಲೂ ಹೋಗದಿರುವ ತಾಯಿ, 2015 ರಲ್ಲಿ ಪತಿ ಕಳೆದುಕೊಂಡು ಮಗನ ಆಶ್ರಯದಲ್ಲಿದ್ದಾಗ ಒಂದು ದಿನ ಮಾತನಾಡುತ್ತಾ ಬೇರೆ ಬೇರೆ ಸ್ಥಳಗಳ ಹೆಸರು ಹೇಳುತ್ತಿದ್ದಾಗ, ಮಗ ಪಕ್ಕದ ಬೇಲೂರು ಹಳೇಬೀಡು ನೋಡಿಲ್ಲ, 68 ವರ್ಷ ಅಡುಗೆ ಮನೆಯಲ್ಲಿಯೇ ಕಳೆದಿದ್ದೇನೆ ಎಂಬ ತಾಯಿಯ ಮಾತು ಮಗನಿಗೆ ಘಾಸಿಗೊಳಿಸಿತಂತೆ. ತಾಯಿಗೆ ಮಾತು ಕೊಟ್ಟ ಕೃಷ್ಣಕುಮಾರ ಬೆಂಗಳೂರಿನ ಕಂಪನಿಯಲ್ಲಿ ಕಾರ್ಪೊರೇಟ್ ಲೀಡರ್ ಹುದ್ದೆಗೆ
ರಾಜೀನಾಮೆ ನೀಡಿ 2018ರಲ್ಲಿ ಜನವರಿ 16 ರಿಂದ ದೇಶ ಪರ್ಯಟನೆ ಆರಂಭಿಸಿದರು. ಸದ್ಯ ಸವಣೂರು, ಹೊಸರಿತ್ತಿ, ಹಾವನೂರು, ಲಕ್ಷ್ಮೇಶ್ವರ ಯಾತ್ರೆ ಮುಗಿಸಿಕೊಂಡು ಹುಬ್ಬಳ್ಳಿಗೆ ಕಳೆದ ದಿನ (ಸೋಮವಾರ) ರಾತ್ರಿ ಆಗಮಿಸಿರುವ ತಾಯಿ-ಮಗ, ಭವಾನಿನಗರ ರಾಯರ ಮಠ, ಕಲ್ಯಾಣನಗರ ಉತ್ತರಾದಿಮಠ, ಶ್ರೀ ಸಿದ್ದಾರೂಢಸ್ವಾಮಿಮಠದ ದರ್ಶನ ಪಡೆದಿದ್ದಾರೆ.
ಕಲಿಯುಗದ ಶ್ರವಣಕುಮಾರ ಎಂಬ ಬಿರುದನ್ನು ಧಾರವಾಡದಲ್ಲಿ 2018 ನನಗೆ ಕೊಟ್ಟಿರುವ ನೆಲವಾಗಿದೆ. ಧಾರವಾಡದ ನೆಲ ನನ್ನ ಯಾತ್ರೆಗೆ ತಿರುವು ಕೊಟ್ಟ ಭೂಮಿಯಾಗಿದ್ದು ಎಂದು ಮರೆಯುವುದಿಲ್ಲ ಎನ್ನುತ್ತಾರೆ ಕೃಷ್ಣಕುಮಾರ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
11/03/2026 02:14 pm
LOADING...