ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಕರ್ತವ್ಯ ಪ್ರಜ್ಞೆ ಮೆರೆದ ಪೋಸ್ಟ್ ಮಾಸ್ಟರ್ ! ಗ್ರಾಹಕರು ಮರೆತ 50 ಸಾವಿರ ಮರಳಿ ಹಸ್ತಾಂತರ

ಕುಂದಗೋಳ : ಗ್ರಾಹಕರೊಬ್ಬರು ಅಂಚೆ ಕಚೇರಿಯಲ್ಲಿ ಮರೆತ 50 ಸಾವಿರ ರೂಪಾಯಿ ನಗದು ಹಣವನ್ನು ಪುನಃ ಹಿಂದಿರುಗಿಸುವ ಮೂಲಕ ಪೋಸ್ಟ್ ಮಾಸ್ಟರ್ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.

ಎಸ್.! ವೀಕ್ಷಕರೇ ಕುಂದಗೋಳ ಪಟ್ಟಣದ ಅಂಚೆ ಕಚೇರಿಗೆ ಮಾರ್ಚ್.10 ರಂದು ಗ್ರಾಹಕರೊಬ್ಬರು 3 ಲಕ್ಷ ಹಣ ತೆಗೆದುಕೊಂಡು ಬಂದು ತಮ್ಮ ಬಳಿ 2.50 ಲಕ್ಷ ಇದೆ ಎಂದು 2.50 ಲಕ್ಷ ಹಣವನ್ನು ತಮ್ಮ ಅಂಚೆ ಕಚೇರಿ ಖಾತೆಗೆ ಜಮಾ ಮಾಡಿ ಹೊರಟು ಹೋಗಿದ್ದಾರೆ.

ಬಳಿಕ ರಾತ್ರಿ ಮನೆಗೆ ಹೋದಾಗ ಅಂಚೆ ಕಚೇರಿಗೆ ಮನೆಯಿಂದ ಒಯ್ದ ಹಣ 3 ಲಕ್ಷ ಅವಸರದಲ್ಲಿ 2.50 ಲಕ್ಷ ಎಂದು ನಮೂದಿಸಿ 50 ಸಾವಿರ ಹೆಚ್ಚಿನ ಹಣ ಮರೆತಿರುವುದು ಗಮನಕ್ಕೆ ಬಂದು ಪೋಸ್ಟ್ ಮಾಸ್ಟರ್ ಮಹೇಶ್ ರಾಮನಕೊಪ್ಪ ಅವರಿಗೆ ಕರೆ ಮಾಡಿದಾಗ ನಾಳೆ ಬನ್ನಿ ನಿಮ್ಮ ಹಣ ಇದೆ ಎಂದು ಮರಳಿ ಹಣ ನೀಡಿ ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಹೀಗೆ ಕರ್ತವ್ಯ ಪ್ರಜ್ಞೆ ಮೆರೆದ ಪೋಸ್ಟ್ ಮಾಸ್ಟರ್ ಮಹೇಶ್ ರಾಮನಕೊಪ್ಪ ಅವರಿಗೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಸತೀಶ್ ಕೊಬ್ಬಯ್ಯನವರ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ಧ್ವನಿ ಚಂದ್ರಕಾಂತ ಕಾದ್ರೋಳ್ಳಿ ಬಣದ ತಾಲೂಕು ಅಧ್ಯಕ್ಷ ಕೋಟೆಪ್ಪ ತಳಗೇರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊನ್ನಪ್ಪ ದೊಡ್ಡಮನಿ, ಜಿಲ್ಲಾ ಕೋಶಾಧ್ಯಕ್ಷರಾದ ಮಂಜುನಾಥ ತಳಗೇರಿ ಅವರು ಗೌರವಿಸಿ ಸನ್ಮಾನಿಸಿ, ಸಿಹಿ ನೀಡಿದ್ದಾರೆ.

ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್ ಕುಂದಗೋಳ

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

11/03/2026 09:24 pm

Cinque Terre

68.59 K

Cinque Terre

3

ಸಂಬಂಧಿತ ಸುದ್ದಿ