ಚಿತ್ರದುರ್ಗ: ಜಿಲ್ಲಾ ಪೊಲೀಸ್ ವತಿಯಿಂದ ಜಿಲ್ಲೆಯ ಪೊಲೀಸ್ ಅಧಿಕಾರಿ & ಸಿಬ್ಬಂದಿಯವರಿಗೆ ಉತ್ತಮ ಆರೋಗ್ಯ ಕಲ್ಪಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿದ್ದ ಯೋಗ ತರಬೇತಿ ಶಿಬಿರವು 3 ದಿನಗಳ ಕಾಲ ಅತ್ಯುತ್ತಮವಾಗಿ ನಡೆದಿದ್ದು, ಇಂದು ಮಾನ್ಯ ಪೊಲೀಸ್ ಅಧೀಕ್ಷಕರು ಯೋಗ ಶಿಬಿರಕ್ಕೆ ಆಗಮಿಸಿ ಸ್ವತಃ ತಾವೇ ಯೋಗ ಮಾಡುವ ಮೂಲಕ ಶಿಬಿರದಲ್ಲಿ ಉತ್ಸುಕತೆಯಿಂದ ಪಾಲ್ಗೊಂಡರು.
ನಂತರ ಯೋಗದ ಬಗೆಗಿನ ಕೈಪಿಡಿಯನ್ನು ಶ್ರೀ ಹಂಜ ಹುಸೇನ್, ಕಮಾಂಡೆಂಟ್ 12ನೇ ಪಡೆ, ಕೆ.ಎಸ್.ಆರ್.ಪಿ, ತುಮಕೂರು ರವರೊಂದಿಗೆ ಬಿಡುಗಡೆ ಮಾಡಿದರು. 3 ದಿನಗಳ ಕಾಲ ಯಶಸ್ವಿಯಾಗಿ ತರಬೇತಿಯನ್ನು ನಡೆಸಿಕೊಟ್ಟ ಗುರುಮಾ. ಡಾ. ಭಾಗೀರತಿ ಕನ್ನಡತಿ ರವರಿಗೆ ಜಿಲ್ಲಾ ಪೊಲೀಸ್ ವತಿಯಿಂದ ಆತ್ಮೀಯ ಸನ್ಮಾನವನ್ನು ನೀಡಲಾಯಿತು.
Kshetra Samachara
12/03/2026 08:13 pm
LOADING...