ಮೊಳಕಾಲ್ಮೂರು: ಹಳ್ಳಿಗಳಲ್ಲಿ ದ್ವೇಷ ಮತ್ತು ಅಸೂಯೆಗಳನ್ನು ಮರೆತು ಜನರು ಒಂದಾದಾಗ ಮಾತ್ರ ಸುಸ್ಥಿರ ಅಭಿವೃದ್ಧಿ ಸಾಧ್ಯ ಎಂದು ಪಿಎಸ್ಐ ಮಹೇಶ್ ಲಕ್ಷ್ಮಣ್ ಹೊಸಪೇಟೆ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಚಿಕ್ಕೋಬನಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಗ್ರಾಮದೇವತೆ ಶ್ರೀದುರ್ಗಮ್ಮ ದೇವಿ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಶಿಸ್ತು ಮತ್ತು ಶಾಂತಿ ಕಾಪಾಡಿದ ಪೊಲೀಸ್ ಇಲಾಖೆಗೆ ಭಾನುವಾರ ಗ್ರಾಮಸ್ಥರು ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಕುವೆಂಪು ಅವರ ಆಶಯದಂತೆ ಭಾರತವು ಸರ್ವ ಜನಾಂಗಗಳ ಶಾಂತಿಯ ತೋಟವಾಗಬೇಕು. ನಮ್ಮೊಳಗಿನ ಸಾಮರಸ್ಯ ಮತ್ತು ಸಹೋದರತ್ವದ ಭಾವನೆ ಈ ತೋಟವನ್ನು ಮತ್ತಷ್ಟು ಸುಂದರಗೊಳಿಸುತ್ತದೆ ಎಂದು ಅವರು ತಿಳಿಸಿದರು.
ಗಾಂಧೀಜಿಯವರ 'ರಾಮರಾಜ್ಯ'ದ ಕನಸು ನನಸಾಗಬೇಕಾದರೆ ಗ್ರಾಮೀಣ ಭಾರತವು ಮೊದಲು ಸಾರಾಯಿ ಮುಕ್ತವಾಗಬೇಕು. ಹಳ್ಳಿಗಳಲ್ಲಿ ಕಣ್ಣುತಪ್ಪಿಸಿ ನಡೆಯುವ ಅಕ್ರಮ ಮದ್ಯ ಮಾರಾಟಕ್ಕೆ ಸಂಪೂರ್ಣ ಕಡಿವಾಣ ಹಾಕಬೇಕಿದೆ.
ಅಕ್ರಮ ಮದ್ಯ ಮಾರಾಟದ ಬಗ್ಗೆ ಗ್ರಾಮದ ಮುಖಂಡರು ಮತ್ತು ಸಾರ್ವಜನಿಕರು ಇಲಾಖೆಗೆ ಮಾಹಿತಿ ನೀಡಿ ಸಹಕರಿಸಬೇಕು. ಅಂತಹ ಕಿಡಿಗೇಡಿಗಳ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಗ್ರಾಮದ ಯುವ ಮುಖಂಡ ಓ.ಕರಿಬಸಪ್ಪ ಮಾತನಾಡಿ, "ಜಾತ್ರೆಗಳಲ್ಲಿ ಕಿಡಿಗೇಡಿಗಳಿಂದ ಉಂಟಾಗುವ ಗಲಾಟೆಗಳನ್ನು ಹತೋಟಿಗೆ ತಂದು, ಸುಗಮವಾಗಿ ಉತ್ಸವ ನಡೆಯಲು ಬೆಂಬಲ ನೀಡಿದ ಪೊಲೀಸ್ ಇಲಾಖೆಯ ಕಾರ್ಯ ಶ್ಲಾಘನೀಯ," ಎಂದು ಧನ್ಯವಾದ ಅರ್ಪಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಸಣ್ಣಬೋಸಯ್ಯ, ಪಿ.ವಿ. ಶರಣಪ್ಪ, ವಸಂತ ಕುಮಾರ್,ಸಿದ್ದೇಶ್ವರ, ದಾಸಪ್ಪ, ಸೂರಯ್ಯ, ಕೆ.ಟಿ. ಶಿವಕುಮಾರ್, ಹೆಚ್.ಎಂ. ರವಿಕುಮಾರ್, ಓಬಯ್ಯ, ಎಂ.ಇ. ಮಲ್ಲೇಶಪ್ಪ . ಬಿ.ಟಿ. ರಮೇಶ. ಸಿಬಿ ಕೊಲ್ಲಪ್ಪ.ಸೇರಿದಂತೆ ಗ್ರಾಮದ ಪ್ರಮುಖರು ಹಾಗೂ ಯುವಕರು ಉಪಸ್ಥಿತರಿದ್ದ
Kshetra Samachara
15/03/2026 05:46 pm
LOADING...