ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸಪೇಟೆ : ಸಚಿವ ದಿನೇಶ್ ಗುಂಡೂರಾವ್, ಶಾಸಕ ಶ್ರೀನಿವಾಸ್ ಮಧ್ಯದ ವಾಕ್ ಸಮರಕ್ಕೆ ಸದನ ಫುಲ್ ಸೈಲೆಂಟ್

ಹೊಸಪೇಟೆ : ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿರೋ ಪಿಎಚ್'ಸಿ ಉನ್ನತೀಕರಣ ಹಾಗೂ, ಮೂರು ಹೊಸ PHC, CHC ಮಂಜೂರು ಮಾಡುವ ವಿಚಾರಕ್ಕೆ ಕೂಡ್ಲಿಗಿ ಕಾಂಗ್ರೆಸ್ ಶಾಸಕ ಡಾ.ಎನ್.ಟಿ ಶ್ರೀನಿವಾಸ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಧ್ಯೆ ವಿಧಾನಸೌಧ ಅಧಿವೇಶನದಲ್ಲಿ ಮಾತಿನ ಚಕಮಕಿ ನಡೆದಿದೆ.

ನಮ್ಮ ತಾಲೂಕು ಗಣಿ ಬಾಧಿತ ಪ್ರದೇಶ, ಕಲ್ಯಾಣ ಕರ್ನಾಟಕ ಹಾಗೂ ತೀರಾ ಹಿಂದುಳಿದ ತಾಲೂಕು ವ್ಯಾಪ್ತಿಗೆ ಬರುತ್ತದೆ. ನಮ್ಮ ತಾಲೂಕಿನ PHC ಉನ್ನತೀಕರಣ ಮಾಡಬೇಕು, ಮೂರು ಹೊಸ CHC ಕೊಡಿ ಅಂತ ಹತ್ತಾರು ಬಾರಿ ಅಲೆದಾಡಿದ್ರೂ ನಮ್ಮ ಮನವಿಗೆ ಸಚಿವರು, ಅಧಿಕಾರಿಗಳು ಕ್ಯಾರೇ ಅಂತಿಲ್ಲ. ಸ್ಪೀಕರ್ ಆದ ನೀವು ನನ್ನ ಬೆಂಬಲಕ್ಕೆ ಬರಬೇಕು ಅಂತ ಅಸಮಾಧಾನ ಹೊರಹಾಕಿದ್ದಾರೆ. ಈ ವೇಳೆ ಕೂಡಲೇ ಎದ್ದು ನಿಂತ ಸಚಿವ ದಿನೇಶ್ ಗುಂಡೂರಾವ್, PHC ಉನ್ನತೀಕರಣ, CHCಗಳನ್ನ ಮಂಜೂರು ಮಾಡಬೇಕು ಅಂದ್ರೆ ಇಂತಹದ್ದೇ ಅಂತ ಮಾನದಂಡ ಇದೆ. ಆ ಮಾನದಂಡ ವ್ಯಾಪ್ತಿಗೆ ಶಾಸಕ ಶ್ರೀನಿವಾಸ್ ಇಟ್ಟಿರೋ ಬೇಡಿಕೆ ಬರೋದಿಲ್ಲ. ನಮ್ಮಲ್ಲಿ KEMRC ಇಲಾಖೆಯಲ್ಲಿ ಹಣ ಇದೆ ಆಸ್ಪತ್ರೆ ಕಟ್ಟಿಕೊಳ್ತಿವಿ ಅಂತಾರೆ. ಹಣ ಇದ್ರೆ ಖರ್ಚು ಮಾಡಲೇಬೇಕು ಮಾಡಿ ಅಂತ ಉತ್ತರಿಸಿದ್ರು.

ಇದಕ್ಕೆ ಮತ್ತೆ ಬೇಸರ ವ್ಯಕ್ತಪಡಿಸಿದ ಶ್ರೀನಿವಾಸ್ ಈ ಹಿಂದೆ ಕೂಡ್ಲಿಗಿ ತಾಲೂಕು, ಕೊಟ್ಟೂರು ತಾಲೂಕು ಸೇರಿ ಒಂದು ಕ್ಷೇತ್ರ ಇತ್ತು. ಅದರ ಆಧಾರದ ಮೇಲೆ 5 PHC ಇದೆ. ಆದ್ರೆ ಈಗಿನ ಜನಸಂಖ್ಯೆ ನಮ್ಮಲ್ಲಿ ಹೆಚ್ಚಿರುವ ಕಾರಣ PHC ಉನ್ನತೀಕರಣ, CHCಗಳ ಅವಶ್ಯಕತೆ. ಅಧಿಕಾರಿಗಳು ಸಚಿವರಿಂದ ತಪ್ಪು ಮಾಹಿತಿಯನ್ನ ಸದನಕ್ಕೆ ಕೊಡಿಸುತ್ತಿದ್ದಾರೆ. ಇದು ಸರಿಯಲ್ಲ ಅಂತ ಆಕ್ರೋಶ ಹೊರಹಾಕಿದ್ದಾರೆ. ಇದಕ್ಕೆ ಮತ್ತೆ ಉತ್ತರಿಸಿದ ಸಚಿವ ಗುಂಡೂರಾವ್, KEMRCಯಲ್ಲಿ ಹಣ ಇದ್ರೆ ಆಸ್ಪತ್ರೆ ಕಟ್ಟಿಸಿಕೊಳ್ಳೋದಕ್ಕೆ ನಮ್ಮದೇನು ಅಭ್ಯಂತರ ಇಲ್ಲ. ಆದ್ರೆ ಶಾಸಕರು ಹೇಳುವ ಮಾಹಿತಿ, ಆರೋಗ್ಯ ಇಲಾಖೆಯಲ್ಲಿರೋ ಮಾಹಿತಿ ಮತ್ತೊಮ್ಮೆ ಪರಿಶೀಲನೆ ಮಾಡುತ್ತೇವೆ. PHC, CHC ಕೊಡೋದಕ್ಕೆ ಅವಕಾಶ ಇದ್ರೆ ಖಂಡಿತ ಕೊಡುತ್ತೇವೆ. ಶ್ರೀನಿವಾಸ್ ಅವರನ್ನ ಕರೆದು ಮಾತಾಡಿ ಸರಿಪಡಿಸುತ್ತೇನೆ ಅಂತ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ರು.

Edited By :
PublicNext

PublicNext

13/03/2026 07:54 am

Cinque Terre

11.19 K

Cinque Terre

0